ʼಕೊರೊನಾʼ ಕುರಿತ ನರ್ಸ್ ಟ್ವೀಟ್ ಭಾರೀ ವೈರಲ್….! 18-11-2020 7:40AM IST / No Comments / Posted In: Latest News, International ದಕ್ಷಿಣ ಡಕೋಟಾದ ಕೋವಿಡ್ ಕೇರ್ ಸೆಂಟರ್ನ ನರ್ಸ್ ಒಬ್ಬರು ಕೊರೊನಾ ಕುರಿತಾದ ವಿಚಿತ್ರ ಅನುಭವವೊಂದನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದ್ದರೂ ಸಹ ಅದೆಷ್ಟೋ ರೋಗಿಗಳು ಇನ್ನೂ ಕೊರೊನಾ ಅನ್ನೋ ವೈರಸ್ ಇಲ್ಲ ಎಂದೇ ಹೇಳುತ್ತಾರಂತೆ. ನಾವು ಪಿಪಿಇ ಕಿಟ್ಗಳನ್ನ ಧರಿಸಿ ರೋಗಿಗಳನ್ನ ಭೇಟಿಯಾಗಲು ಹೋದರೆ ಅದೆಷ್ಟೋ ಮಂದಿ ಇದನ್ನೆಲ್ಲ ಯಾಕೆ ಧರಿಸಿದ್ದೀರಿ ಎಂದು ನಮ್ಮನ್ನ ಕೇಳಿದ್ದಿದೆ. ಯಾಕಂದ್ರೆ ಆ ಎಲ್ಲ ರೋಗಿಗಳ ಪ್ರಕಾರ ಕೊರೊನಾ ಎಂಬ ವೈರಸ್ ಅಸ್ತಿತ್ವದಲ್ಲೇ ಎಲ್ಲ ಎಂದು ಟ್ವೀಟಾಯಿಸಿದ್ದಾರೆ. ರೋಗಿಗಳಿಗೆ ಕೊರೊನಾ ಬಂದಿದ್ದರೂ ಸಹ ಅದನ್ನ ನ್ಯುಮೋನಿಯಾ ಇಲ್ಲವೇ ಶ್ವಾಸಕೋಶದ ಕ್ಯಾನ್ಸರ್ ಎಂದು ನಂಬೋಕೆ ರೋಗಿಗಳು ತಯಾರಿದ್ದಾರೆ. ಆದರೆ ಕೊರೊನಾ ಅಂತಾ ಮಾತ್ರ ಜನರು ನಂಬೋದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನರ್ಸ್ರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಸಾಕಷ್ಟು ರಿ ಟ್ವೀಟ್ಗಳನ್ನ ಪಡೆದುಕೊಂಡಿದೆ. A South Dakota ER nurse @JodiDoering says her Covid-19 patients often “don’t want to believe that Covid is real.” “Their last dying words are, ‘This can’t be happening. It’s not real.’ And when they should be… Facetiming their families, they’re filled with anger and hatred.” pic.twitter.com/tgUgP6znAT — CNN This Morning with Kasie Hunt (@CNNThisMorning) November 16, 2020