ಅಮೆರಿಕ ನೌಕಾಪಡೆ ಮುಖ್ಯಸ್ಥ ಮೈಕೆಲ್ ಎಂ ಗಿಲ್ಡೆ ಹಾಗೂ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರ ನಡುವಿನ ಭೋಜನಕೂಟದಲ್ಲಿ ಅಮೆರಿಕ ನೌಕಾಪಡಾ ಸದಸ್ಯರು ಪ್ರಸಿದ್ಧಿ ಹಿಂದಿ ಹಾಡನ್ನ ಹಾಡಿದ್ದಾರೆ.
ಶನಿವಾರ ಸಂಧು ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದು ಇದರಲ್ಲಿ ಅಧಿಕಾರಿಗಳು ಯೇ ಜೋ ದೇಶ್ ಹೈ ತೇರಾ ಹಾಡನ್ನ ಹಾಡ್ತಿರೋದನ್ನ ಕಾಣಬಹುದಾಗಿದೆ. ಈ ವಿಡಿಯೋಗೆ ಸಂಧು ಈ ಸ್ನೇಹ ಸಂಬಂಧ ಎಂದಿಗೂ ಮುರಿಯೋದಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ. 2004ರಲ್ಲಿ ತೆರೆ ಕಂಡ ಸ್ವದೇಶ್ ಸಿನಿಮಾದ ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.