ರೆಸ್ಟೋ ರೆಂಟ್ನಲ್ಲಿ ಒಂದೇ ಒಂದು ಬೀರ್ ಖರೀದಿ ಮಾಡಿದ್ದ ಅಮೆರಿಕದ ಗ್ರಾಹಕನೊಬ್ಬ ಬರೋಬ್ಬರಿ 2,21,950.50 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದಾನೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ರೆಸ್ಟೋ ರೆಂಟ್ ಕೊಂಚ ಚೇತರಿಸಿಕೊಳ್ಳಲಿ ಅಂತಾ ಗ್ರಾಹಕ ಈ ದೇಣಿಗೆ ನೀಡಿದ್ದಾನೆ.
ಒಹಿಯೋದ ಕ್ಲೀವ್ಲ್ಯಾಂಡ್ನ ವ್ಯಕ್ತಿಯೊಬ್ಬರು ಬೀರ್ಗೆ ಆರ್ಡರ್ ಮಾಡಿದ್ದರು. ನಾವು ಬಿಲ್ ಪಾವತಿ ಮಾಡಿ ಎಂದಾಗ ಅವರು ನೀಡಿದ ಚೆಕ್ ನೋಡಿ ನಮಗೆ ಹೆಚ್ಚುವರಿ ಹಣ ನೀಡಿದ್ದಾರೆ ಎಂಬ ಅಂಶ ಗೊತ್ತಾಯ್ತು ಅಂತಾ ರೆಸ್ಟೋ ರೆಂಟ್ ಮಾಲೀಕ ಬ್ರೆಂಡಾನ್ ರಿಂಗ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಟಿಪ್ ನೀಡಿದ ವ್ಯಕ್ತಿ ರೆಸ್ಟೋ ರೆಂಟ್ ಗೆ ಶುಭವಾಗಲಿ ಎಂದು ಹಾರೈಸಿದ್ದು ಮಾತ್ರವಲ್ಲದೇ, ಆ ವೇಳೆಯಲ್ಲಿ ರೆಸ್ಟೋ ರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ 4 ಮಂದಿ ಸಿಬ್ಬಂದಿಗೂ ಟಿಪ್ಸ್ನಲ್ಲಿ ಪಾಲು ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟು ದೊಡ್ಡ ಮೊತ್ತದ ಟಿಪ್ಸ್ ಕಂಡ ಮಾಲೀಕ ಗ್ರಾಹಕರ ಹಿಂದೆಯೇ ಓಡಿದ್ದಾರೆ. ಆ ವೇಳೆ ಗ್ರಾಹಕ ನಾನು ತಪ್ಪಾಗಿ ಈ ಹಣವನ್ನ ನೀಡಿಲ್ಲ. ನಿಮ್ಮ ರೆಸ್ಟೋ ರೆಂಟ್ ಪುನಾರಂಭವಾಗುತ್ತಿದ್ದಂತೆ ಮತ್ತೊಮ್ಮೆ ಭೇಟಿಯಾಗೋಣ ಎಂದು ಹೇಳಿದ್ದಾರಂತೆ.