ಹೈದರಾಬಾದ್: ಅಮೆರಿಕದಲ್ಲಿ ಹೆಚ್ -1 ಬಿ ವೀಸಾ, ಗ್ರೀನ್ ಕಾರ್ಡ್ ರಗಳೆಗೆ ಬೇಸತ್ತ ಬಹುತೇಕ ಭಾರತೀಯರು ಅಮೆರಿಕ ತೊರೆಯಲು ಮುಂದಾಗಿದ್ದಾರೆ. ಈಗ ಕೆನಡಾ ನೆಚ್ಚಿನ ಉದ್ಯೋಗದ ನೆಲೆಯಾಗಿದೆ.
ಅಮೆರಿಕದಲ್ಲಿರುವ ಅನೇಕ ಭಾರತೀಯ ಕುಟುಂಬಗಳು ಕೆನಡಾಕ್ಕೆ ವಾಸ್ತವ್ಯ ಬದಲಿಸತೊಡಗಿವೆ. ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಗ್ರೀನ್ ಕಾರ್ಡ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಭ್ರಮನಿರಸನವಾಗಿದೆ.
ಸುಮಾರು 20 ಸಾವಿರ ಭಾರತೀಯರು ಪ್ರತಿವರ್ಷ ಕೆನಡಾಕ್ಕೆ ಅಮೆರಿಕದಿಂದ ತೆರಳುತ್ತಿದ್ದು, ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕಳೆದ 8 ವರ್ಷದ ಅವಧಿಯಲ್ಲಿ ಶೇಕಡ 50 ರಷ್ಟು ಅಮೆರಿಕದಲ್ಲಿನ ಭಾರತೀಯರ ಜನಸಂಖ್ಯೆ ಇಳಿಮುಖವಾಗಿದೆ.
ಗ್ರೀನ್ ಕಾರ್ಡ್ ಇಲ್ಲದಿದ್ದರೆ ಅಮೆರಿಕದಲ್ಲಿ ಉನ್ನತ ಹುದ್ದೆ ಸಿಗಲ್ಲ ಎಂಬ ಕಾರಣಕ್ಕೆ ಅನೇಕರು ಕೆನಡಾದತ್ತ ನೆಲೆ ಬದಲಿಸತೊಡಗಿದ್ದಾರೆ ಎನ್ನಲಾಗಿದೆ.