alex Certify ಬೆಕ್ಕಿನ ರೂಪದಲ್ಲಿ ದಂಪತಿಗೆ ಒಲಿಯಿತು ‘ಅದೃಷ್ಟ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಕ್ಕಿನ ರೂಪದಲ್ಲಿ ದಂಪತಿಗೆ ಒಲಿಯಿತು ‘ಅದೃಷ್ಟ’

ಈ ಅದೃಷ್ಟ ಅನ್ನೋದು ಯಾವ ಕಡೆಯಿಂದ ಹೇಗೆ ಒದ್ದುಕೊಂಡು ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಅಮೆರಿಕ ದಂಪತಿಗೆ ಸಾಕಿದ ಬೆಕ್ಕಿನಿಂದ ಬಂಪರ್‌ ಲಾಟರಿಯೊಂದು ಖುಲಾಯಿಸಿದೆ.

ಮೂರು ವರ್ಷಗಳ ಹಿಂದೆ ದತ್ತು ಪಡೆದುಕೊಂಡ ಬೆಕ್ಕೊಂದನ್ನು ಸಾಕುತ್ತಿದ್ದ ಈ ಜೋಡಿ ಒಮ್ಮೆ ಅದಕ್ಕೆ ಆಹಾರ ತರಲು ಹೋಗಿದ್ದ ವೇಳೆ ಎರಡು ಲಾಟರಿ ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ. ಪತಿ ಕಾರ್ಡ್‌ಗೆ ಏನೂ ಗಿಟ್ಟಲಿಲ್ಲ. ಆದರೆ ಪತ್ನಿಯ ಕಾರ್ಡ್ ಸ್ಕ್ರಾಚ್ ಮಾಡಿ ನೋಡಿದಾಗ $50,000 ಗೆದ್ದಿದ್ದಾರೆ.

ತಾವೇನಾದರೂ ಆ ಬೆಕ್ಕನ್ನು ಸಾಕದೇ ಇದ್ದಲ್ಲಿ ಕ್ಯಾಟ್ ಫುಡ್ ಖರೀದಿ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ ಹಾಗೂ ಈ ಅದೃಷ್ಟವೂ ಖುಲಾಯಿಸುತ್ತಿರಲಿಲ್ಲ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...