
ನ್ಯಾಯಾಧೀಶರು ನೀವು ಫಿಲ್ಟರ್ ಆಯ್ಕೆಯನ್ನ ಆನ್ ಮಾಡಿದ್ದೀರಿ ಎನಿಸುತ್ತೆ ಎಂದು ಹೇಳಿದ ಕೂಡಲೇ ವಕೀಲ ನಾನು ಬೆಕ್ಕು ಅಲ್ಲ. ನಾನು ನಿಜವಾಗಿಯೂ ಸಭೆಯಲ್ಲಿ ಹಾಜರಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದರು.
ಇದೇ ರೀತಿಯ ಇನ್ನೊಂದು ಘಟನೆಗೆ ಮಿನ್ನೆಸೋಟಾದ ರಿಪಬ್ಲಿಕನ್ ಪ್ರತಿನಿಧಿ ಟಾಮ್ ಎಮ್ಮರ್ ಸಾಕ್ಷಿಯಾಗಿದ್ದಾರೆ. ವರ್ಚುವಲ್ ಹೌಸ್ ಫೈನಾನ್ಶಿಯಲ್ ಸರ್ವಿಸ್ ಕಮಿಟಿ ಸಭೆಯಲ್ಲಿ ಟಾಮ್ ಎಮ್ಮರ್ ಸಮಿತಿ ಉದ್ದೇಶಿಸಿ ಮಾತನಾಡುತ್ತಿರುವ ವೇಳೆ ಅವರ ಮುಖ ತಲೆಕೆಳಗಾಗಿ ಕಂಡಿದೆ.
ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..!
ವಿಡಿಯೋದಲ್ಲಿ ಎಮ್ಮರ್ ಇದನ್ನ ಹೇಗೆ ಸರಿಪಡಿಸಬೇಕು ಎಂದು ಹೇಳೊದನ್ನ ಕಾಣಬಹುದಾಗಿದೆ. ಅದಕ್ಕೆ ಒಬ್ಬ ಮಹಳೆ ಕನಿಷ್ಟ ಇವರು ಬೆಕ್ಕಲ್ಲ ಎಂದು ಉತ್ತರ ನೀಡಿದ್ದಾರೆ.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ ಟಾಮ್ ಎಮ್ಮರ್ ನಾನು ಬೆಕ್ಕಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದೆ.