ಅಮೆರಿಕ ಸಂಸತ್ ಜಂಟಿ ಅಧಿವೇಶನದಲ್ಲಿ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ರನ್ನ ಅಧಿಕೃತವಾಗಿ ಅಮೆರಿಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಎಂದು ಘೋಷಣೆ ಮಾಡಲಾಗಿದೆ.
ಉಪಾಧ್ಯಕ್ಷ ಮೈಕ್ ಪೆನ್ಸ್ ನೇತೃತ್ವದಲ್ಲಿ ನಡೆದ ಸಂಸತ್ ಜಂಟಿ ಅಧಿವೇಶನದಲ್ಲಿ ಎಲೆಕ್ಟೋರಲ್ ಕಾಲೇಜಿನ ಮತ ಎಣಿಕೆ ಮಾಡಲಾಗಿದ್ದು, 306 ಎಲೆಕ್ಟೋರಲ್ ಮತಗಳನ್ನ ಗಳಿಸಿರುವ ಜೋ ಬಿಡೆನ್ ಅಮೆರಿಕದ ಅಧಿಕೃತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಮುಂಜಾನೆ ಸಂಸತ್ ಜಂಟಿ ಅಧಿವೇಶನದಲ್ಲಿ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ರ ವಿಜಯವನ್ನ ಔಪಚಾರಿಕವಾಗಿ ಪ್ರಮಾಣೀಕರಿಸಲಾಯ್ತು. ಅಮೆರಿಕ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರ ಹಿಂಸಾಚಾರ ತಣ್ಣಗಾದ ಬಳಿಕ ಬುಧವಾರ ಮಧ್ಯರಾತ್ರಿಯಿಂದ ಜಂಟಿ ಅಧಿವೇಶನವನ್ನ ಮುಂದುವರಿಸಿ ಈ ಘೋಷಣೆ ಮಾಡಲಾಗಿದೆ.
78ರ ಹರೆಯದ ಜೋ ಬಿಡೆನ್ ಹಾಗೂ 56 ವರ್ಷದ ಕಮಲಾ ಹ್ಯಾರಿಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಜನವರಿ 30ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೊರೊನಾ ಮಾರ್ಗಸೂಚಿಗಳನ್ನ ಗಮನದಲ್ಲಿಟ್ಟುಕೊಂಡು ಪ್ರಮಾಣ ವಚನ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.