alex Certify ಆನ್ಲೈನ್ ಬೈಬಲ್ ತರಗತಿ ವೇಳೆ ನಡೀತು ಈ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಬೈಬಲ್ ತರಗತಿ ವೇಳೆ ನಡೀತು ಈ ಘಟನೆ

ಲಾಕ್ ಡೌನ್ ಕಾರಣ ವಿಶ್ವದಾದ್ಯಂತ ಶಾಲಾ-ಕಾಲೇಜು ಸೇರಿದಂತೆ ಎಲ್ಲ ವಿದ್ಯಾ ಮಂದಿರಗಳು ಬಂದ್ ಆಗಿವೆ.

ಅನೇಕರು ಆನ್ಲೈನ್ ಮೂಲಕ ಕಲಿಕೆ ಶುರು ಮಾಡಿದ್ದಾರೆ.

ಶಾಲೆ ಪಠ್ಯದಿಂದ ಹಿಡಿದು ಧರ್ಮಗ್ರಂಥ, ಯೋಗ ಸೇರಿದಂತೆ ಎಲ್ಲವೂ ಈಗ ಆನ್ಲೈನ್ ನಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.

ಈ ಮಧ್ಯೆ ಆನ್ಲೈನ್ ಹ್ಯಾಕರ್ ಹಾವಳಿ ಹೆಚ್ಚಾಗಿದೆ. ಜೂಮ್ ಹ್ಯಾಕರ್ ಕಾಟಕ್ಕೆ ಬಲಿಯಾಗ್ತಿದೆ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ವೇಳೆ ಅಶ್ಲೀಲ ಫೋಟೋಗಳು ಅಪ್ಲೋಡ್ ಆದ ಘಟನೆಗಳು ಬೆಳಕಿಗೆ ಬಂದಿವೆ. ಈಗ ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.

ಆನ್ಲೈನ್ ಬೈಬಲ್ ತರಗತಿಯ ಸಮಯದಲ್ಲಿ ಅಶ್ಲೀಲ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಈ ಕಾರಣದಿಂದಾಗಿ ನೂರಾರು ಜನರು ಮುಜುಗರಪಟ್ಟುಕೊಳ್ಳುವಂತಾಗಿದೆ. ಈ ಬೈಬಲ್ ತರಗತಿಯನ್ನು ನಡೆಸುತ್ತಿದ್ದ ಚರ್ಚ್ ಜೂಮ್ ವಿರುದ್ಧ ದೂರು ದಾಖಲಿಸಿದೆ. ಪ್ರಸಾರವಾದ ಅಶ್ಲೀಲ ವಿಡಿಯೋದಲ್ಲಿ ಸಣ್ಣ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...