alex Certify ಕೊರೊನಾ ವೈರಸ್ ಎಂಬುದೇ ಹಸಿ ಸುಳ್ಳು ಎಂದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್ ಎಂಬುದೇ ಹಸಿ ಸುಳ್ಳು ಎಂದ ಭೂಪ

ಲಕ್ಷಾಂತರ ಜನರು ಕೊರೊನಾ ಕಾಟ ಅನುಭವಿಸುತ್ತಿದ್ದು, ಇವರಲ್ಲಿ ಕೆಲವರು ಕಣ್ಣೆದುರೇ ಸಾಯುತ್ತಿದ್ದಾರೆ.

ಅಮೆರಿಕಾದಲ್ಲೊಬ್ಬ ಭೂಪ ಕೊರೊನಾ ವೈರಾಣು ಎಂಬುದು ಶುದ್ಧ ಸುಳ್ಳು. ನಂಬಬೇಡಿ ಎಂದೆಲ್ಲ ಬೊಬ್ಬೆ ಹೊಡೆಯುತ್ತಿದ್ದಾನೆ.

ಸಾಲದ್ದಕ್ಕೆ ಮಾಸ್ಕ್ ಧರಿಸದೆ ಸೂಪರ್ ಮಾರ್ಕೆಟ್ ಗೆ ನುಗ್ಗಿ ಬೃಹನ್ನಾಟಕ ನಡೆಸಿದ್ದಾನೆ.

ಮಾಸ್ಕ್ ಧರಿಸಿದ್ದವರನ್ನೆಲ್ಲ ಮೂರ್ಖರು ಎಂದು ಬೈಯ್ಯಲು ಶುರು ಮಾಡಿದ ಆತ, ಸಾರ್ವಜನಿಕ ಸ್ಥಳದಲ್ಲೆಲ್ಲ ಏಕೆ ಮಾಸ್ಕ್ ಹಾಕಿಕೊಳ್ಳಬೇಕು ? ಅದರ ಆವಶ್ಯಕತೆ ಏನಿದೆ ? ಈ ಕೊರೊನಾ ವೈರಸ್ ಎಲ್ಲ ಸುಳ್ಳು ? ಎನ್ನುತ್ತಾ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದಾನೆ.

ಯಾರು ಎಷ್ಟು ಸಮಾಧಾನ ಮಾಡಿದರೂ ಪ್ರಯೋಜನ ಆಗದೇ ಇದ್ದಾಗ ಅಲ್ಲಿದ್ದ ಯುವಕನೊಬ್ಬ ಈತನನ್ನು ಎತ್ತಿ ಹೊರ ಹಾಕಿದ್ದಾನೆ. ಸಿಟ್ಟಿನಲ್ಲಿ ಖಾಲಿ ಕ್ರೇಟ್ ಗೆ ಗುದ್ದಿ ಹೋಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...