alex Certify ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮನೆಗೆ ಹೋಗಲು ಸುರಂಗ ತೋಡಿದ್ದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮನೆಗೆ ಹೋಗಲು ಸುರಂಗ ತೋಡಿದ್ದ ಭೂಪ..!

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಆಕೆಯ ಮನೆಗೆ ತೆರಳಲು ರಹಸ್ಯ ಸುರಂಗ ನಿರ್ಮಿಸಿ ಇದೀಗ ಆಕೆಯ ಪತಿ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಹಿಳೆಯ ಪತಿ ಕೆಲಸಕ್ಕೆ ತೆರಳಿದ ಸಮಯದಲ್ಲಿ ಈತ ತನ್ನ ಮನೆಯಿಂದ ಆಕೆಯ ಮನೆಗೆ ಉದ್ದದ ಸುರಂಗ ಕೊರೆಯುವ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಮಹಿಳೆಯ ಪತಿ ಜಾರ್ಜ್​ ಮನೆಯಿಂದ ಹೊರಡುವ ಸಮಯವನ್ನೇ ಕಾಯುತ್ತಿದ್ದ ಇಬ್ಬರು ಸುರಂಗ ಮಾರ್ಗದ ಮೂಲಕ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರಂತೆ.

ಒಂದು ದಿನ ಜಾರ್ಜ್​ ನಿಗದಿತ ಸಮಯಕ್ಕಿಂತ ವೇಗವಾಗಿ ಮನೆಗೆ ಬಂದಿದ್ದರಿಂದ ಪತ್ನಿಯ ಕಳ್ಳಾಟ ಬೆಳಕಿಗೆ ಬಂದಿದೆ.

ಜಾರ್ಜ್​ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆಲ್ಬರ್ಟೋ ಸೋಫಾದ ಹಿಂದೆ ಅಡಗಿದ್ದ. ಆತನ ಮನೆಯ ಸಮೀಪದಲ್ಲೇ ಇದ್ದ ಸುರಂಗ ಮಾರ್ಗವನ್ನ ಜಾರ್ಜ್ ಪರಿಶೀಲಿಸಿದಾಗ ಇದು ನೇರವಾಗಿ ಅಲ್ಬರ್ಟೋ ಮನೆಗೆ ಸಂಪರ್ಕ ಹೊಂದಿರುವ ವಿಚಾರ ತಿಳಿದು ಬಂದಿದೆ.

ಈ ಸುರಂಗ ಮಾರ್ಗದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಲ್ಲಿಯವರೆಗೆ ಸುರಂಗ ಮಾರ್ಗದ ಅಳತೆಯ ಬಗ್ಗೆ ಯಾವುದೇ ವರದಿಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...