ಕೊರೊನಾ ವೈರಸ್ನಿಂದಾಗಿ ಜನರಿಗೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಕಡಿಮೆಯಾಗಬಾರದೆಂದು ನಿರ್ಧರಿಸಿದ ವ್ಯಕ್ತಿಯೊಬ್ಬ ಜನರಿಗೆಂದೇ ಸ್ಪೆಶಲ್ ಕ್ರಿಸಮಸ್ ಮಾರುಕಟ್ಟೆಯನ್ನ ತೆರೆದಿದ್ದಾರೆ. ಇಲ್ಲಿ ನೀವು ಪ್ರವೇಶ ಮಾಡ್ತಿದ್ದಂತೆಯೇ ಕೃತಕ ಮಂಜಿನ ಹನಿಗಳು ನಿಮಗೆ ಸ್ವಾಗತ ಕೋರಲಿವೆ.
ಜರ್ಮನಿಯಲ್ಲಿ ಕ್ರಿಸ್ಮಸ್ ಹಬ್ಬ ಸಮೀಪಿಸ್ತಾ ಇದ್ದಂತೆಯೇ 2500ಕ್ಕೂ ಹೆಚ್ಚು ಕ್ರಿಸ್ ಮಸ್ ಮಾರುಕಟ್ಟೆಗಳು ತಲೆಯೆತ್ತುತ್ತಿದ್ದವು. ಆದರೆ ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ನ್ಯೂರೆಂಬರ್ಗ್ನ ವಿಶ್ವ ಪ್ರಸಿದ್ಧ ಕ್ರೈಸ್ತ್ ಕಿಂಡಲ್ಮಾರ್ಕ್ ಕೂಡ ಓಪನ್ ಆಗೋದು ಅನುಮಾನ ಎನ್ನಲಾಗ್ತಿದೆ.
ಮ್ಯೂನಿಚ್ನ ಈಶಾನ್ಯಕ್ಕೆ 60 ಕಿಲೋಮೀಟರ್ ದೂರದಲ್ಲಿರುವ ಲ್ಯಾಂಡ್ಶರ್ಟ್ನಲ್ಲಿ ಮಾರುಕಟ್ಟೆಯನ್ನ ಸ್ಮಿತ್ ತೆರೆದಿದ್ದಾರೆ. ಅಲ್ಲದೇ ನಾನು ಕೇವಲ ಪಟಾಕಿ ಹಾಗೂ ಬಾದಾಮಿಯನ್ನ ಮಾರೋದಿಲ್ಲ. ಬದಲಾಗಿ ಅನುಭವವನ್ನ ಮಾರಾಟ ಮಾಡ್ತೇನೆ ಅಂತಾ ಸ್ಮಿತ್ ಹೇಳಿದ್ದಾರೆ.