ಮೇಲುನೋಟಕ್ಕೆ ಹುರಿದ ಚಿಕನ್ ತುಂಡಿನಂತೆ ಕಾಣುವ ಇದು ಒಂದು ಸ್ವಚ್ಛ ಹರಳಾಗಿದೆ ಎಂದು ಕೂಲಂಕಷವಾಗಿ ಗಮನಿಸಿದ ಬಳಿಕವಷ್ಟೇ ತಿಳಿದುಬರುತ್ತದೆ.
ಇಂಡಿಯಾನಾದ ಅಮೆಲಿನಾ ರೂಡ್ ಎಂಬುವವರಿಗೆ ಈ ಹರಳು ಕಂಡುಬಂದಿದ್ದು, ಅವರು ಅದರ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಬಲೇ ಬೇಗ ವೈರಲ್ ಆಗಿದೆ.
ಇಂಡಿಯಾನಾದಲ್ಲಿ ತಮ್ಮ ಸಂಗಾತಿಯೊಂದಿಗೆ ಹರಳುಗಳ ಬ್ಯುಸಿನೆಸ್ ನಡೆಸುವ ಅಮೆಲಿಯಾ, ಬ್ರೇಸ್ಲೆಟ್ಗಳು ಹಾಗೂ ಇತರೆ ವಿಧದ ಒಡವೆಗಳನ್ನು ತಮ್ಮ ಗ್ರಾಹಕರಿಗೆ ತಯಾರಿಸಿಕೊಡುತ್ತಾರೆ. ಅಮೇಲಿಯಾ ಬಳಿ 700ಕ್ಕೂ ಹೆಚ್ಚು ಬಗೆಯ ಹರಳುಗಳ ಸಂಗ್ರಹವಿದೆ.