alex Certify ಆಘಾತಕಾರಿಯಾಗಿದೆ ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಕುರಿತ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಘಾತಕಾರಿಯಾಗಿದೆ ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಕುರಿತ ಈ ಮಾಹಿತಿ

ಕೊರೊನಾದಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಆನ್​ಲೈನ್​ ಶಿಕ್ಷಣದ ಮೊರೆ ಹೋಗಿವೆ. ಆದರೆ ವಿಶ್ವದ ಪ್ರತಿ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮನೆಯಲ್ಲಿ ಇಂಟರ್​ನೆಟ್​ ಸೌಕರ್ಯ ಇಲ್ಲದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅಂತಾ ಯುಎನ್​ ವರದಿ ಆಘಾತಕಾರಿ ಮಾಹಿತಿಯೊಂದನ್ನ ನೀಡಿದೆ.

ವಿಶ್ವದಲ್ಲಿ 3 ರಿಂದ 17 ವರ್ಷ ವಯಸ್ಸಿನ ಸರಿ ಸುಮಾರು 1.3 ಬಿಲಿಯನ್​ ವಿದ್ಯಾರ್ಥಿಗಳು ಶಿಕ್ಷಣ ಸೌಕರ್ಯವಿಲ್ಲದೇ ಒದ್ದಾಡುತ್ತಿದ್ದಾರೆ.

ಯುವ ವಿದ್ಯಾರ್ಥಿಗಳಿಗೂ ಈ ಸಮಸ್ಯೆ ಇದ್ದು ವಿಶ್ವದಲ್ಲಿ ಶೇಕಡಾ 63ರಷ್ಟು ಯುವ ವಿದ್ಯಾರ್ಥಿಗಳೂ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ.

ಕೊರೊನಾದಿಂದಾಗಿ ವಿಶ್ವದಲ್ಲಿ ಆನ್​ಲೈನ್​ ಶಿಕ್ಷಣಕ್ಕೆ ಮಹತ್ವ ಹೆಚ್ಚಾಗಿರೋದು ನಿಜ. ಆದರೆ ಇಂಟರ್​ನೆಟ್​ ಸೌಕರ್ಯವಿಲ್ಲದ ಕಾರಣ ಈ ವರ್ಷ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಯುಎನ್​ಐಸಿಇಎಫ್​​​ ಮುಖ್ಯಸ್ಥೆ ಹೆನ್ರಿಟಾ ಕಳವಳ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...