ಬ್ರಿಟನ್‌ನ 44 ವರ್ಷ ವಯಸ್ಸಿನ ಮ್ಯಾರಾಥಾನ್ ಓಟಗಾರ ಡಾಮಿಯನ್ ಹಾಲ್ ದಾಖಲೆ ವೇಗದಲ್ಲಿ 430 ಕಿಮೀ ದೂರವನ್ನು ಕ್ರಮಿಸಿದ್ದಲ್ಲದೇ, ಹಾದಿಯಲ್ಲಿ ಸಿಕ್ಕ ತ್ಯಾಜ್ಯವನ್ನೆಲ್ಲಾ ಹೆಕ್ಕುತ್ತಾ ಸಾಗಿದ್ದಾರೆ.
ಸ್ಕಾಟ್ಲೆಂಡ್‌ನ ಗಡಿಯಿಂದ ಡರ್ಬಿಶೈರ್‌ವರೆಗೂ ತಮ್ಮ ಈ ಓಟವನ್ನು 61 ಗಂಟೆ 34 ನಿಮಿಷಗಳಲ್ಲಿ ಮಾಡಿ ಮುಗಿಸಿದ್ದಾರೆ ಡಾಮಿಯನ್ ಹಾಲ್. ಈ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಮೂರು ಗಂಟೆಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಮುರಿದಿದ್ದಾರೆ.
ಬಹುತೇಕ ಹೈಕರ್‌ಗಳು ಹಾಗೂ ಓಟಗಾರರಿಗೆ ಈ ದೂರವನ್ನು ಕ್ರಮಿಸಲು 16-19 ದಿನಗಳು ಬೇಕಾಗುತ್ತವೆ. ಆದರೆ ಡಾಮಿಯಾನ್ ಈ ಕೆಲಸವನ್ನು ಕೇವಲ 2 ದಿನಗಳಲ್ಲಿ ಮಾಡಿ ಮುಗಿಸಿದ್ದಾರೆ. ಅದೂ ತ್ಯಾಜ್ಯವನ್ನು ಹೆಕ್ಕುತ್ತಾ…!