ಸಾಲದ ಕಂತನ್ನ ತೀರಿಸದೇ ಕಳ್ಳಾಟ ನಡೆಸುವ ಸಾಲಗಾರರಿಗೆ ಉಕ್ರೇನ್ ಸರ್ಕಾರ ವಿಚಿತ್ರವೆನಿಸಿದ್ರೂ ಸಹ ಸರಿಯಾದ ಪಾಠವನ್ನೇ ಕಲಿಸಿದೆ.
ಸಾಮಾನ್ಯವಾಗಿ ಸಾಲ ತೀರಿಸಲಾಗದವರ ಬಳಿ ಇರುವ ಬೆಲೆ ಬಾಳುವ ವಸ್ತುಗಳನ್ನ ಮುಟ್ಟುಗೋಲು ಹಾಕಿ ಅದನ್ನ ಹರಾಜಿಗೆ ಇಡಲಾಗುತ್ತೆ. ಆದರೆ ಇಲ್ಲಿ ಸಾಲಗಾರರ ಒಳ ಉಡುಪುಗಳನ್ನ ಹರಾಜಿಗೆ ಇಟ್ಟ ಪ್ರಸಂಗ ನಡೆದಿದೆ.
ಉಕ್ರೇನ್ನ ಕ್ರಿವಿ ರಿಹ್ ನಗರದಲ್ಲಿ ಈ ವಿಚಿತ್ರ ಘಟನೆ ಸಂಭವಿಸಿದೆ. ಸಾಲಗಾರರ ಮನೆ ಮೇಲೆ ನಡೆಸಲಾದ ದಾಳಿಯಲ್ಲಿ ಒಳಉಡುಪುಗಳನ್ನ ವಶಕ್ಕೆ ಪಡೆಯಲಾಗಿದೆ.
ದೇಶದ ಕಾನೂನು ಸಚಿವಾಲಯ ಈ ಒಳ ಉಡುಪುಗಳನ್ನ 50 ರೂಪಾಯಿ ಮೂಲ ಬೆಲೆಯಿಂದ ಹರಾಜಿಗಿಟ್ಟಿವೆ.
36 ಜೋಡಿ ಒಳ ಉಡುಪುಗಳನ್ನ ಹರಾಜಿಗೆ ಇಡಲಾಗಿದೆ ಎಂದು ಫೇಸ್ಬುಕ್ನ ಓಪನ್ ಮಾರ್ಕೆಟ್ ಎಂಬ ಖಾತೆಯು ಪೋಸ್ಟ್ ಮಾಡಿದೆ.
ಉಕ್ರೇನ್ನಲ್ಲಿ ಈ ರೀತಿಯ ವಿಚಿತ್ರ ವಸ್ತುಗಳನ್ನ ಹರಾಜಿಗೆ ಇರಿಸಿರೋದು ಇದೇ ಮೊದಲೇನಲ್ಲ. ಸಾಲಗಾರರ ಹಸು ಹಾಗೂ ಕುರಿಗಳನ್ನೂ ಹರಾಜಿಗೆ ಇಡಲಾಗಿದೆ. ಇಷ್ಟೇ ಏಕೆ ಸಾಕು ನಾಯಿಗಳು ಕೂಡ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿರೋದು ಇದೆ.
https://www.facebook.com/setam.gov/photos/a.835838999847492/3552267754871256