ಸದಾ ಚಳಿ ದೇಶವೆಂದೇ ಹೇಳಲಾಗುವ ಯುಕೆನಲ್ಲಿ ಇದೀಗ ದಾಖಲೆ ಪ್ರಮಾಣದ ತಾಪಮಾನ ದಾಖಲಾಗಿದೆ. ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 36.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇದು ಆಗಸ್ಟ್ ತಿಂಗಳಲ್ಲಿ ಕಳೆದ 17 ವರ್ಷಗಳ ದಾಖಲೆಯ ತಾಪಮಾನ ಎಂದು ಹೇಳಲಾಗಿದೆ. ಇನ್ನು ಕಳೆದ ವಾರವಷ್ಟೇ ಇದೇ ಸ್ಥಳದಲ್ಲಿ 37.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಹಲವು ವರ್ಷಗಳ ದಾಖಲೆಯನ್ನು ಮುರಿದು ಹಾಕಿತ್ತು.
ವೇಲ್ಸ್‌ನಲ್ಲಿ ಇದಕ್ಕೂ ಮೊದಲು 26.4 ಡಿಗ್ರಿ, ಸ್ಕಾಟ್‌ಲ್ಯಾಂಡ್‌ನಲ್ಲಿ 20.9 ಡಿಗ್ರಿ ಮತ್ತು ಉತ್ತರ ಐರ್ಯಾಂಡ್‌ನಲ್ಲಿ 20.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಗರದಲ್ಲಿ ಬಿಸಿಲಿನ ವಾತಾವರಣ ಕಾಣಿಸಿಕೊಂಡ ಬೆನ್ನಲ್ಲೇ, ಶುಕ್ರವಾರ ಅನೇಕರು ಮನೆಯಿಂದ ಆಚೆ ಬಂದು ಸಂಭ್ರಮಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಶುಕ್ರವಾರ ರಾತ್ರಿ 20 ಡಿಗ್ರಿ ದಾಖಲಾಗಿತ್ತು ಎಂದು ವರದಿಯಾಗಿತ್ತು.