ಬ್ರಿಟನ್ನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿರುವ ಪಬ್ ಹಾಗೂ ರೆಸ್ಟೊರೆಂಟ್ಗಳು ಏಪ್ರಿಲ್ನಲ್ಲಿ ಪುನಾರಂಭಗೊಳ್ಳಲಿದೆ. ಆದರೆ ಇಲ್ಲಿ ಆಲ್ಕೋಹಾಲ್ಗಳನ್ನ ಸರ್ವ್ ಮಾಡೋಕೆ ಅವಕಾಶ ಇರೋದಿಲ್ಲ ಎಂದು ವರದಿಗಳು ಹೇಳಿವೆ.
ಏಪ್ರಿಲ್ ಬಳಿಕ ಪಬ್ ಹಾಗೂ ರೆಸ್ಟಾರೆಂಟ್ಗಳನ್ನ ಓಪನ್ ಮಾಡಲಿರುವ ಬ್ರಿಟನ್ ಸರ್ಕಾರ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಅಂದಹಾಗೆ ಇವುಗಳ ಪುನಾರಂಭಕ್ಕೆ ಇಲ್ಲಿಯವರೆಗೆ ನಿಗದಿತ ದಿನಾಂಕವನ್ನ ಪ್ರಕಟಿಸಲಾಗಿಲ್ಲ. ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನ ಗಮನದಲ್ಲಿ ಇಟ್ಟುಕ್ಕೊಂಡು ಪ್ರಧಾನಿ ಬೋರಿಸ್ ಜಾನ್ಸನ್ ಇಂಗ್ಲೆಂಡ್ನಲ್ಲಿ ಮಾರ್ಚ್ 8ನೇ ತಾರೀಖಿನವರೆಗೆ ಲಾಕ್ಡೌನ್ ಜಾರಿ ಮಾಡಿದ್ದರು.