50 ಸಾವಿರ ಕೊರೊನಾ ಸಾವುಗಳ ಸಂಖ್ಯೆಯನ್ನ ದಾಖಲಿಸುವ ಮೂಲಕ ಯುಕೆ ಯುರೋಪ್ನ ಅತಿ ಹೆಚ್ಚು ಕೊರೊನಾ ಸಾವನ್ನ ಹೊಂದಿದೆ ಅಂತಾ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಈ ವಾರದಲ್ಲಿ 22,950 ಹೊಸ ಪ್ರಕರಣಗಳು ದಾಖಲಾಗಿವೆ. ಮಾರಣಾಂತಿಕ ವೈರಸ್ನಿಂದ ಯುಕೆಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 50365ಕ್ಕೆ ತಲುಪಿದ್ದು, ಈ ಮೂಲಕ ಅಮೆರಿಕ, ಬ್ರೆಜಿಲ್, ಭಾರತ ಹಾಗೂ ಮೆಕ್ಸಿಕೋ ಬಳಿಕ ಸಾವಿನ ಸಂಖ್ಯೆ 50 ಸಾವಿರದ ಗಡಿ ದಾಟಿದ ರಾಷ್ಟ್ರ ಯುಕೆ ಆಗಿದೆ.
ದೇಶದಲ್ಲಿ ನಡೆದ ಪ್ರತಿಯೊಂದು ಸಾವು ಒಂದು ದುರಂತ. ಸಾವಿಗೀಡಾದ ಪ್ರತಿಯೊಬ್ಬರಿಗಾಗಿ ನಾವು ಶೋಕಿಸುತ್ತೇವೆ. ಅವರ ಕುಟುಂಬದ ಜೊತೆ ನಾವಿದ್ದೇನೆ ಅಂತಾ ಪ್ರಧಾನಿ ಜಾನ್ಸನ್ ಹೇಳಿದ್ದಾರೆ.