alex Certify ಲಾಕ್​ ಡೌನ್​ ಘೋಷಣೆಯ ಕೆಲ ಗಂಟೆಗಳ ಮುನ್ನ ನಡೆದಿದೆ ಈ ವಿಶೇಷ ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್​ ಡೌನ್​ ಘೋಷಣೆಯ ಕೆಲ ಗಂಟೆಗಳ ಮುನ್ನ ನಡೆದಿದೆ ಈ ವಿಶೇಷ ಮದುವೆ

2018ರಲ್ಲಿ ಸ್ಕೂಬಾ ಡೈವಿಂಗ್​ ಮಾಡುವಾಗ ರೋಸಿ ಎಂಬವರು ತಮ್ಮ ಪತಿಯನ್ನ ಕಳೆದುಕೊಂಡರು. ಕ್ಯಾನ್ಸರ್​ನಿಂದಾಗಿ ಜೊನಾಥನ್​ ಗಿಲ್​ ಮಾಸ್​ ತಮ್ಮ ಪತ್ನಿಯನ್ನ ಕಳೆದುಕೊಂಡ್ರು. ಇದಾದ ಮೇಲೆ ಜೀವನೇ ಮುಗೀತು ಅಂದುಕೊಂಡ ಇವರ ಬಾಳಲ್ಲಿ 2020 ಹೊಸ ಬದಲಾವಣೆಯ ಪರ್ವವನ್ನೇ ತಂದಿದೆ.

ರೋಸಿ ಹಾಗೂ ಗಿಲ್​ ಪರಸ್ಪರ ಭೇಟಿಯಾದರು. ಹಾಗೂ ಇವರ ನಡುವೆ ಪ್ರೇಮಾಂಕುರವಾಯ್ತು. ಬ್ರಿಟನ್​ನಲ್ಲಿ ಲಾಕ್​ಡೌನ್​ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ಇವರಿಬ್ರು ವಿವಾಹವಾದ್ರು. ಇವರಿಬ್ಬರು ಕೆಂಟ್​​ ನಗರದವರಾಗಿದ್ದು ಸಣ್ಣ ಸಮಾರಂಭವೊಂದರಲ್ಲಿ ವಿವಾಹವಾದರು ಅಂತಾ ಡೇಲಿ ಮೇಲ್​ ವರದಿ ಮಾಡಿದೆ.

2019ರ ಅಂತ್ಯದಲ್ಲಿ ಡೇಟಿಂಗ್​ ಮಾಡಲು ಪ್ರಾರಂಭಿಸಿದ ಜೋಡಿ ಸಂತೋಷದಿಂದ ಇರುವಾಗಲೇ ಜೊನಾಥನ್​ ಕೋವಿಡ್​ ಸೋಂಕಿಗೆ ಒಳಗಾದ್ರು. ತೀವ್ರ ರೋಗ ಲಕ್ಷಣ ಅನುಭವಿಸಿದ ಜೋನಾಥನ್​ ಕೋಮಾಗೆ ಜಾರಿದರು. ಆತ ರೋಗದಿಂದ ಚೇತರಿಕೆ ಕಂಡ ಬಳಿಕ ರೋಸಿಯನ್ನ ಮದುವೆಯಾಗಲು ಬಯಸಿದ್ದರೆಂದು ಹೇಳಿದ್ದಾರೆ.

ಅವರು ಅಂತಿಮವಾಗಿ ಟನ್‌ಬ್ರಿಡ್ಜ್ ವೆಲ್ಸ್‌ನ ಮ್ಯಾನ್ಷನ್ ಹೌಸ್‌ನಲ್ಲಿ ತಮ್ಮ ಇಬ್ಬರು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಲು ನಿರ್ಧರಿಸಿದರು. ಹೀಗಾಗಿ ಲಾಕ್​ಡೌನ್​ನ ಕೆಲವೇ ಗಂಟೆಗಳ ಮುನ್ನ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...