2018ರಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ರೋಸಿ ಎಂಬವರು ತಮ್ಮ ಪತಿಯನ್ನ ಕಳೆದುಕೊಂಡರು. ಕ್ಯಾನ್ಸರ್ನಿಂದಾಗಿ ಜೊನಾಥನ್ ಗಿಲ್ ಮಾಸ್ ತಮ್ಮ ಪತ್ನಿಯನ್ನ ಕಳೆದುಕೊಂಡ್ರು. ಇದಾದ ಮೇಲೆ ಜೀವನೇ ಮುಗೀತು ಅಂದುಕೊಂಡ ಇವರ ಬಾಳಲ್ಲಿ 2020 ಹೊಸ ಬದಲಾವಣೆಯ ಪರ್ವವನ್ನೇ ತಂದಿದೆ.
ರೋಸಿ ಹಾಗೂ ಗಿಲ್ ಪರಸ್ಪರ ಭೇಟಿಯಾದರು. ಹಾಗೂ ಇವರ ನಡುವೆ ಪ್ರೇಮಾಂಕುರವಾಯ್ತು. ಬ್ರಿಟನ್ನಲ್ಲಿ ಲಾಕ್ಡೌನ್ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ಇವರಿಬ್ರು ವಿವಾಹವಾದ್ರು. ಇವರಿಬ್ಬರು ಕೆಂಟ್ ನಗರದವರಾಗಿದ್ದು ಸಣ್ಣ ಸಮಾರಂಭವೊಂದರಲ್ಲಿ ವಿವಾಹವಾದರು ಅಂತಾ ಡೇಲಿ ಮೇಲ್ ವರದಿ ಮಾಡಿದೆ.
2019ರ ಅಂತ್ಯದಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಜೋಡಿ ಸಂತೋಷದಿಂದ ಇರುವಾಗಲೇ ಜೊನಾಥನ್ ಕೋವಿಡ್ ಸೋಂಕಿಗೆ ಒಳಗಾದ್ರು. ತೀವ್ರ ರೋಗ ಲಕ್ಷಣ ಅನುಭವಿಸಿದ ಜೋನಾಥನ್ ಕೋಮಾಗೆ ಜಾರಿದರು. ಆತ ರೋಗದಿಂದ ಚೇತರಿಕೆ ಕಂಡ ಬಳಿಕ ರೋಸಿಯನ್ನ ಮದುವೆಯಾಗಲು ಬಯಸಿದ್ದರೆಂದು ಹೇಳಿದ್ದಾರೆ.
ಅವರು ಅಂತಿಮವಾಗಿ ಟನ್‌ಬ್ರಿಡ್ಜ್ ವೆಲ್ಸ್‌ನ ಮ್ಯಾನ್ಷನ್ ಹೌಸ್‌ನಲ್ಲಿ ತಮ್ಮ ಇಬ್ಬರು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಲು ನಿರ್ಧರಿಸಿದರು. ಹೀಗಾಗಿ ಲಾಕ್ಡೌನ್ನ ಕೆಲವೇ ಗಂಟೆಗಳ ಮುನ್ನ ವೈವಾಹಿಕ ಜೀವನಕ್ಕೆ ಕಾಲಿಟ್ಟರು.