
ರೇಸಿಂಗ್ ಪರಿವಾಳಗಳನ್ನ ಹರಾಜು ಮಾಡುವ ಬೆಲ್ಜಿಯಂನ ಪಿಪಾದಲ್ಲಿ ನಡೆದ 2 ದಿನಗಳ ಹರಾಜು ಕಾರ್ಯಕ್ರಮದಲ್ಲಿ ಚೀನಾ ಮೂಲದ ಖರೀದಿದಾರರೊಬ್ಬರು ಈ ಪಾರಿವಾಳವನ್ನ ಖರೀದಿ ಮಾಡಿದ್ದಾರೆ. ಈ ಮೂಲಕ ಕಳೆದ ವರ್ಷ 1.25 ಮಿಲಿಯನ್ ಯುರೋಗೆ ಮಾರಾಟವಾಗಿದ್ದ ಆರ್ಮಡೋ ಎಂಬ ಗಂಡು ಪಾರಿವಾಳದ ದಾಖಲೆ ಮುರಿದು ಬಿದ್ದಿದೆ.
ಪಾರಿವಾಳಗಳ ಹರಾಜು ಪ್ರಕ್ರಿಯೆಯಲ್ಲಿ ಇದೊಂದು ವಿಶ್ವ ದಾಖಲೆ ಎಂದು ನನಗನಿಸುತ್ತಿದೆ. ಈ ಹೆಣ್ಣು ಪಾರಿವಾಳ ಇಷ್ಟೊ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತೆ ಎಂದು ನಾವು ಭಾವಿಸಿರಲಿಲ್ಲ. ಬಹುಶಃ ಚೀನಿ ಮೂಲದ ಖರೀದಿದಾರರು ಪಾರಿವಾಳದ ಸಂತಾನೋತ್ಪತ್ತಿ ಮಾಡ್ತಾರೆ ಎಂದೆನಿಸುತ್ತೆ ಅಂತಾ ಪಿಪಾ ಅಧ್ಯಕ್ಷ ನಿಕೋಲಾಸ್ ಗಿಸೆಲ್ಖ್ರೆಕ್ ಹೇಳಿದ್ರು.