alex Certify ತಮಾಷೆ ಮಾಡಲು ಹೋಗಿ ಜೈಲು ಪಾಲಾದ ಸಹೋದರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಾಷೆ ಮಾಡಲು ಹೋಗಿ ಜೈಲು ಪಾಲಾದ ಸಹೋದರರು

ಪ್ರಚೋದನಾತ್ಮಕ ವಿಡಿಯೋಗಳ ಮೂಲಕವೇ ಕುಖ್ಯಾತಿ ಪಡೆದಿರುವ ಯುಟ್ಯೂಬ್​ ಸ್ಟಾರ್​ ಸಹೋದರರಾದ ಎಲನ್​ ಹಾಗೂ ಎಲೆಕ್ಸ್ ಕ್ಯಾಲಿಫೋರ್ನಿಯಾದಲ್ಲಿ ನಕಲಿ ಬ್ಯಾಂಕ್​ ದರೋಡೆ ಆರೋಪದಡಿಯಲ್ಲಿ ಅಪರಾಧಿಗಳು ಎಂದು ಪರಿಗಣಿಸಲಾಗಿದೆ.

23 ವರ್ಷದ ಈ ಸಹೋದರರಿಗೆ ಹಿಂಸಾಚಾರ, ಅಪಾಯ ಹಾಗೂ ವಂಚನೆ ಆರೋಪದಡಿಯಲ್ಲಿ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಇಬ್ಬರು ದುಷ್ಕರ್ಮಿಗಳ ಮೇಲೆ 2019ರ ಅಕ್ಟೋಬರ್​ 15ರಂದು ಇರ್ವಿನ್​ ನಗರದಲ್ಲಿ ನಡೆದ ತುರ್ತು ಪರಿಸ್ಥಿತಿ ಬಗ್ಗೆ ತಪ್ಪಾದ ವರದಿ ಮಾಡಿದ ಆರೋಪವನ್ನೂ ಹೊರಿಸಲಾಗಿದೆ. ಆರೆಂಜ್​ ಕೌಂಟಿ ಜಿಲ್ಲಾ ಅಟಾರ್ನಿ ಕಾರ್ಯಾಲಯದ ಪ್ರಕಾರ, ಈ ಆರೋಪಗಳಿಗೆ 5ವರ್ಷಗಳವರೆಗೆ ಜೈಲು ಶಿಕ್ಷೆ ಸಿಗಲಿದೆ.

ಯುಟ್ಯೂಬ್​ನಲ್ಲಿ 7 ಮಿಲಿಯನ್​ಗೂ ಅಧಿಕ ಚಂದಾದಾರರನ್ನ ಹೊಂದಿರುವ ಈ ಸಹೋದರರಿಗೆ ಪ್ರಚೋದನಾತ್ಮಕ ವಿಡಿಯೋಗಳನ್ನ ಬಿತ್ತರಿಸದಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.

ಎಲಾನ್ ಹಾಗೂ ಎಲೆಕ್ಸ್​ ಜನರನ್ನ ರಂಜಿಸುವ ಸಲುವಾಗಿ ನಕಲಿ ದರೋಡೆಯ ಪ್ಲಾನ್​ ಮಾಡಿದ್ದರು. ಹಣವನ್ನ ದರೋಡೆ ಮಾಡಿದಂತೆ ನಟಿಸಿ ಹಣದ ಬ್ಯಾಗ್​ನ್ನು ಊಬರ್​ ಚಾಲಕನ ಕಾರಿನಲ್ಲಿಟ್ಟಿದ್ದರು. ಆದರೆ ಇದು ಪ್ರ್ಯಾಂಕ್​ ಎಂದು ಅರಿವಿಲ್ಲದ ಪೊಲೀಸ್​ ಅಧಿಕಾರಿ ಊಬರ್​ ಚಾಲಕನಿಗೆ ಗನ್​ ತೋರಿಸಿದ್ದರು. ಈ ರೀತಿ ಊಬರ್​ ಚಾಲಕನ ಪ್ರಾಣಕ್ಕೆ ಸಂಚಕಾರ ತರುವಂತಹ ವಿಡಿಯೋವನ್ನ ಶೂಟ್​ ಮಾಡಿದ ಆರೋಪದಡಿಯಲ್ಲಿ ಇವರನ್ನ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಈ ವಿಡಿಯೋವನ್ನ 10 ತಿಂಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು 73 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...