ಔಟಂ ಶಾ ಹಾಗೂ ಅಂಬೆರ್ ಟ್ರಮೊಂಟನಾ ಎಂಬ ಇಬ್ಬರು ಅವಳಿ ಸಹೋದರಿಯರು ತಮ್ಮ ಜನ್ಮದಿನದಂದೇ ಹೆಣ್ಣುಮಕ್ಕಳಿಗೆ ಒಂದೇ ಆಸ್ಪತ್ರೆಯಲ್ಲಿ ಜನ್ಮ ನೀಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಅಕ್ಟೋಬರ್ 29ರಂದು ಈ ಅವಳಿ ಸಹೋದರಿಯರ ಜನ್ಮದಿನವಾಗಿತ್ತು. ಅಚ್ಚರಿಯ ವಿಚಾರ ಅಂದ್ರೆ ಇದೇ ದಿನ ಹೆರಿಗೆ ನೋವಿನಿಂದ ಒಂದೇ ಆಸ್ಪತ್ರೆಗೆ ದಾಖಲಾದ ಈ ಸಹೋದರಿಯರು 90 ನಿಮಿಷದ ಅಂತರದಲ್ಲಿ ಹೆಣ್ಣು ಕಂದಮ್ಮಗಳಿಗೆ ಜನ್ಮ ನೀಡಿದ್ದಾರೆ.
ಮತ್ತೊಂದು ಕುತೂಹಲಕಾರಿ ಅಂಶ ಅಂದ್ರೆ ಇವರಿಬ್ಬರಿಗೂ ಮೊದಲ ಮಕ್ಕಳು ಗಂಡೇ ಆಗಿದ್ದು ಅವು ಕೂಡ ಕೇವಲ 10 ವಾರಗಳ ಅಂತರದಲ್ಲಿ ಜನಿಸಿವೆ. ಇನ್ನು ಈ ಬಗ್ಗೆ ಮಾತನಾಡಿರುವ ಆಸ್ಪತ್ರೆ ವೈದ್ಯ ನನ್ನ 45 ವರ್ಷದ ವೈದ್ಯಕೀಯ ವೃತ್ತಿಯಲ್ಲಿ ಈ ಅನುಭವವಾಗಿದ್ದು ಇದೇ ಮೊದಲು ಅಂತಾ ಹೇಳಿದ್ದಾರೆ.