ಚಳಿಯಲ್ಲಿ ನಡುಗುತ್ತಿದ್ದ ಹಕ್ಕಿಗೆ ಹೇರ್ ಡ್ರೈಯರ್ನಿಂದ ಗಾಳಿ 13-11-2020 4:33PM IST / No Comments / Posted In: Latest News, International ಚಳಿಗಾಲ ಬಂತು ಅಂದ್ರೆ ಸಾಕು. ಪ್ರಾಣಿ – ಪಕ್ಷಿಗಳಿಗೆ ತುಂಬಾನೇ ಕಷ್ಟ. ಚಳಿ ಹೆಚ್ಚಿರುವ ಪ್ರದೇಶಗಳಲ್ಲಂತೂ ಮೂಕ ಪ್ರಾಣಿಗಳು ಸಾಯೋದೂ ಉಂಟು. ಆದರೆ ನಮ್ಮ ಮಾನವೀಯ ಗುಣ ಇಂತಹ ಅದೆಷ್ಟೋ ಮೂಕ ಪ್ರಾಣಿಗಳ ಆರೋಗ್ಯ ಕಾಪಾಡಬಲ್ಲುದು ಅನ್ನೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವೇ ಸಾಕ್ಷಿ. ಇಸ್ತಾನ್ಬುಲ್ನ ಸುಲ್ತಾನ್ಗಾಝಿಯಲ್ಲಿ ವಿಪರೀತ ಚಳಿ ಬೀಳ್ತಿದೆ. ಈ ನಗರದ ನಿವಾಸಿಯಾದ ಸಬಹತ್ತೀನ್ ಯಿಲ್ಮಾಜ್ ಎಂಬವರು ತಮ್ಮ ಮನೆಯ ಕಿಟಕಿ ಬಳಿ ಚಳಿ ತಾಳಲಾರದೇ ನಡುಗುತ್ತಿದ್ದ ಪಾರಿವಾಳವೊಂದನ್ನ ನೋಡಿದ್ದಾರೆ. ಆದರೆ ಅದನ್ನ ಹಿಡಿದು ಮನೆಯೊಳಕ್ಕೆ ತರೋಣ ಅಂದ್ರೆ ಹಕ್ಕಿ ಕೈಗೆಟುಕದ ಜಾಗದಲ್ಲಿ ಕುಳಿತಿತ್ತು. ಹೀಗಾಗಿ ಸಬಹತ್ತೀನ್ ಹೇರ್ ಡ್ರೈಯರ್ ಆನ್ ಮಾಡುವ ಮೂಲಕ ಪಾರಿವಾಳಕ್ಕೆ ಬೆಚ್ಚನೆ ಗಾಳಿ ಸಿಗುವಂತೆ ಮಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸಬಹತ್ತೀನ್ ಮಾನವೀಯತೆಗೆ ಸಲಾಂ ಎಂದಿದ್ದಾರೆ. Warm-hearted homeowner uses a hairdryer to blow-dry a soaked pigeon freezing on his window sill in Turkey https://t.co/h84ZUmWu6i pic.twitter.com/kWuqaSysyg — Daily Mail Online (@MailOnline) November 12, 2020