alex Certify ಜೋ ಬಿಡೆನ್​ ಗೆ ಡೊನಾಲ್ಡ್​ ಟ್ರಂಪ್​ ವಾರ್ನಿಂಗ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋ ಬಿಡೆನ್​ ಗೆ ಡೊನಾಲ್ಡ್​ ಟ್ರಂಪ್​ ವಾರ್ನಿಂಗ್​..!

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಟ್ರಂಪ್​ಗೆ ಸೋಲಿನ ಭೀತಿ ಶುರುವಾಗಿದೆ. ಜೋ ಬಿಡೆನ್​ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆ ಡೊನಾಲ್ಡ್ ಟ್ರಂಪ್​ ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ತಪ್ಪಾದ ದಾರಿಯಲ್ಲಿ ಬಂದು ಬಿಡೆನ್​ ಅಮೆರಿಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಹೊಂಚು ಹಾಕ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.

ಜೋ ಬಿಡೆನ್​​ ಕುತಂತ್ರದಿಂದ ಅಮೆರಿಕ ಅಧ್ಯಕ್ಷರ ಕಚೇರಿಯನ್ನ ಪಡೆದುಕೊಳ್ಳುವಂತಿಲ್ಲ. ಇದರ ವಿರುದ್ಧ ಕಾನೂನು ಕ್ರಮಗಳು ಈಗಾಗಲೇ ಪ್ರಾರಂಭವಾಗಿವೆ ಅಂತಾ ಟ್ರಂಪ್​ ಟ್ವೀಟಾಯಿಸಿದ್ದಾರೆ.

ಜಾರ್ಜಿಯಾ, ನೆವಾಡಾ, ಪೆನ್ಸಿಲ್ವೇನಿಯಾ, ಅರಿಝೋನಾ ಹಾಗೂ ಉತ್ತರ ಕೆರೊಲಿನಾದಲ್ಲಿ ಮತ ಎಣಿಕೆ ಇನ್ನು ಪೂರ್ಣಗೊಂಡಿಲ್ಲ. ಆದರೆ ಈ ಐದು ಯುದ್ಧಭೂಮಿಗಳಲ್ಲಿ ನಾಲ್ಕರಲ್ಲಿ ಬಿಡೆನ್​​ ಮುನ್ನಡೆ ಸಾಧಿಸಿದ್ದಾರೆ. ಆದರೆ ಇದೆಲ್ಲದರ ಹಿಂದೆ ಸಂಚು ಇದೆ ಅನ್ನೋದು ಟ್ರಂಪ್​ ಆರೋಪವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...