ಡೊನಾಲ್ಡ್ ಟ್ರಂಪ್ ಕೊನೆಯ ಅಧಿಕಾರಾವಧಿಯಲ್ಲಿ ತಿಂಗಳಿನಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡಿತ್ತು. ಆದರೆ ಡೊನಾಲ್ಡ್ ಟ್ರಂಪ್ ಕೊರೊನಾ ಲಸಿಕೆ ವಿತರಣೆಯ ಬಗ್ಗೆ ತಲೇನೇ ಕೆಡಿಸಿಕೊಂಡಿರಲಿಲ್ಲ ಎಂದು ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್ ಸಿಬ್ಬಂದಿ ಮುಖ್ಯಸ್ಥ ರಾನ್ ಕ್ಲೈನ್ ಹೇಳಿದ್ದಾರೆ .
ಅಮೆರಿಕದಲ್ಲಿ ಲಸಿಕೆಯನ್ನ ವಿತರಿಸುವ ಪ್ರಕ್ರಿಯೆ ಅದರಲ್ಲೂ ವಿಶೇಷವಾಗಿ ನರ್ಸಿಂಗ್ ಹೋಂ ಹಾಗೂ ಆಸ್ಪತ್ರೆಗಳ ಕೊರೊನಾ ಲಸಿಕೆಗಳನ್ನ ವಿತರಣೆ ಮಾಡುವ ಯೋಜನೆ ನಾವು ಶ್ವೇತಭವನಕ್ಕೆ ಬರುವವರೆಗೂ ಅಮೆರಿಕದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ರಾನ್ ಹೇಳಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್, ಟ್ರಂಪ್ ಆಡಳಿತದ ಅವಧಿಯಲ್ಲಿ ಅಮೆರಿಕದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿಯನ್ನ ಬಲಿ ಪಡೆದ ಕೊರೊನಾ ವಿರುದ್ಧ ತೀವ್ರ ಹೋರಾಟ ನಡೆಸುವ ಭರವಸೆ ನೀಡಿದ್ದಾರೆ.