![True Love: Video of Two Crocodiles Swimming Together in Australia is Melting Hearts](https://images.news18.com/ibnlive/uploads/2021/01/1610866992_gato.jpeg)
ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು.
ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾ ಮೃಗಾಲಯದಲ್ಲಿ ಕೆಲಸ ಮಾಡುವ ವನ್ಯಜೀವಿ ಸಂರಕ್ಷಕ ದಿವಂಗತ ಸ್ಟೀವ್ ಇರ್ವಿನ್ ಪುತ್ರಿ ಬಿಂದಿ ಇರ್ವಿನ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
“ಜೊತೆಯಾಗಿ ಈಜುವ ಜೋಡಿ ಯಾವಾಗಲೂ ಜೊತೆಯಾಗಿಯೇ ಇರುತ್ತವೆ. ಉಪ್ಪುನೀರಿನ ಮೊಸಳೆಗಳು ಪರಸ್ಪರ ಬಹಳ ಪ್ರೀತಿ ಮಾಡಬಲ್ಲವಾಗಿದ್ದು, ಇವುಗಳನ್ನು ನೋಡಲು ಖುಷಿಯಾಗುತ್ತದೆ. ಆಧುನಿಕ ದಿನದ ಈ ಡೈನಾಸೊರ್‌ಗಳನ್ನು ನಾನು, ರಾಬರ್ಟ್, ಚಾಂಡ್ಲರ್ ಹಾಗೂ ನನ್ನ ತಾಯಿ ಪ್ರತಿನಿತ್ಯ ಪೋಷಣೆ ಮಾಡುತ್ತಿದ್ದೇವೆ,” ಎಂದು ಬಿಂದಿ ತಮ್ಮ ಟ್ವೀಟ್ ಒಂದರಲ್ಲಿ ಹೇಳಿಕೊಂಡಿದ್ದು, ಈ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.