alex Certify ಬಳಕೆ ಮಾಡಲು ಯೋಗ್ಯವಲ್ಲದ ಟೈರ್ ಗಳಿಂದ ನಿರ್ಮಾಣವಾಗಿದೆ ಅಪರೂಪದ ಕಲಾಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆ ಮಾಡಲು ಯೋಗ್ಯವಲ್ಲದ ಟೈರ್ ಗಳಿಂದ ನಿರ್ಮಾಣವಾಗಿದೆ ಅಪರೂಪದ ಕಲಾಕೃತಿ

ಬಳಕೆ ಮಾಡಲು ಯೋಗ್ಯವಲ್ಲದ ಪ್ಲಾಸ್ಟಿಕ್​ ಹಾಗೂ ರಬ್ಬರ್​ ತ್ಯಾಜ್ಯವನ್ನ ವಿಲೇವಾರಿ ಮಾಡೋದು ಬಹು ದೊಡ್ಡ ಸವಾಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿರೋದ್ರಿಂದ ಇಂತಹ ತ್ಯಾಜ್ಯಗಳನ್ನ ವಿಲೇವಾರಿ ಮಾಡೋಕೆ ಚತುರ ಮಾರ್ಗಗಳನ್ನ ಹುಡುಕುತ್ತಿದ್ದಾರೆ.

ಅದೇ ರೀತಿ ಚೀನಾದ ಪುರುಷರ ಗುಂಪೊಂದು ರಬ್ಬರ್​ ಟ್ಯೂಬ್​ಗಳನ್ನ ಬಳಸಿ ಪೌರಾಣಿಕ ಶಿಲ್ಪವನ್ನ ತಯಾರು ಮಾಡಿದ್ದಾರೆ. ಸಿಚುವಾನ್​ ಪ್ರಾಂತ್ಯದಲ್ಲಿ ಬಳಕೆ ಮಾಡದೇ ಬಿಸಾಡಲಾದ ಟೈರ್​ಗಳಿಗೆ ಈ ಪುರುಷರ ಗುಂಪು ಎರಡನೇ ಜೀವ ನೀಡಿದೆ.

ಮೂವರ ಗುಂಪು ಸೇರಿ ಕಸದ ಬುಟ್ಟಿ ಸೇರಬೇಕಾದ ಟೈರ್​ಗಳನ್ನ ಬಳಸಿ ದೈತ್ಯ ಗೋಲ್ಡನ್​ ಡ್ರ್ಯಾಗನ್​ ಶಿಲ್ಪವನ್ನ ನಿರ್ಮಿಸಿದ್ದಾರೆ. 1000 ಕ್ಕೂ ಹೆಚ್ಚು ಟೈರ್​ಗಳನ್ನ ಬಳಸಿ 8 ಮೀಟರ್​ ಉದ್ದದ ಮೂರ್ತಿಯನ್ನ ನಿರ್ಮಾಣ ಮಾಡೋಕೆ ಮೂವರ ಗುಂಪು 20 ದಿನಗಳ ಸಮಯವನ್ನ ತೆಗೆದುಕೊಂಡಿದೆ.

— SCMP News (@SCMPNews) January 6, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...