
ಅದೇ ರೀತಿ ಚೀನಾದ ಪುರುಷರ ಗುಂಪೊಂದು ರಬ್ಬರ್ ಟ್ಯೂಬ್ಗಳನ್ನ ಬಳಸಿ ಪೌರಾಣಿಕ ಶಿಲ್ಪವನ್ನ ತಯಾರು ಮಾಡಿದ್ದಾರೆ. ಸಿಚುವಾನ್ ಪ್ರಾಂತ್ಯದಲ್ಲಿ ಬಳಕೆ ಮಾಡದೇ ಬಿಸಾಡಲಾದ ಟೈರ್ಗಳಿಗೆ ಈ ಪುರುಷರ ಗುಂಪು ಎರಡನೇ ಜೀವ ನೀಡಿದೆ.
ಮೂವರ ಗುಂಪು ಸೇರಿ ಕಸದ ಬುಟ್ಟಿ ಸೇರಬೇಕಾದ ಟೈರ್ಗಳನ್ನ ಬಳಸಿ ದೈತ್ಯ ಗೋಲ್ಡನ್ ಡ್ರ್ಯಾಗನ್ ಶಿಲ್ಪವನ್ನ ನಿರ್ಮಿಸಿದ್ದಾರೆ. 1000 ಕ್ಕೂ ಹೆಚ್ಚು ಟೈರ್ಗಳನ್ನ ಬಳಸಿ 8 ಮೀಟರ್ ಉದ್ದದ ಮೂರ್ತಿಯನ್ನ ನಿರ್ಮಾಣ ಮಾಡೋಕೆ ಮೂವರ ಗುಂಪು 20 ದಿನಗಳ ಸಮಯವನ್ನ ತೆಗೆದುಕೊಂಡಿದೆ.