alex Certify ಫೋಟೋ ತೆಗೆದುಕೊಳ್ಳಲು ಹೋಗಿ 200 ವರ್ಷದ ಕಲಾಕೃತಿಗೆ ಹಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋ ತೆಗೆದುಕೊಳ್ಳಲು ಹೋಗಿ 200 ವರ್ಷದ ಕಲಾಕೃತಿಗೆ ಹಾನಿ…!

ಶಿಲ್ಪಿ ಆಂಟೋನಿಯಾ ಕನೋವಾರ 19ನೇ ಶತಮಾನದ ರಚನೆಯೊಂದನ್ನು ಪ್ರವಾಸಿಯೊಬ್ಬರು ಅಕಸ್ಮಾತ್‌ ಆಗಿ ಡ್ಯಾಮೇಜ್ ಮಾಡಿದ ಘಟನೆ ಇಟಲಿಯ ಮ್ಯೂಸಿಯಮ್ ಒಂದರಲ್ಲಿ ಘಟಿಸಿದೆ. ಇಟಲಿಯ ಮಿಲಿಟರಿ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದಾರೆ.

ಉತ್ತರ ಇಟಲಿಯ ಗ್ರಾಮವೊಂದರಲ್ಲಿ ಇರುವ ಝಿಪ್ಸೋಥೆಕಾ ಆಂಟೋನಿಯೋ ಕನೋವಾ ಮ್ಯೂಸಿಯಮ್‌ಗೆ ಭೇಟಿ ನೀಡಿದ್ದ ಈ ಪ್ರವಾಸಿಗ, “Paolina Borghese Bonaparte as Venus Victrix” ಎಂಬ ಕಲಾಕೃತಿಯೊಂದರ ಮೇಲೆ ಕುಳಿತು ಫೋಟೋ ತೆಗೆದುಕೊಳ್ಳುವ ವೇಳೆ ಈ ಘಟನೆ ನಡೆದಿದೆ. ಫೋಟೋ ತೆಗೆಸಿಕೊಂಡು ಆ ಕಲಾಕೃತಿ ಮೇಲಿಂದ ಏಳುವ ವೇಳೆ ಆತ ಅಕಸ್ಮಾತ್‌ ಆಗಿ ಅದರ ಕಾಲಿಗೆ ಹಾನಿ ಮಾಡಿಬಿಟ್ಟಿದ್ದಾರೆ.

ಇದಾದ ಬೆನ್ನಿಗೆ ಕಲಾಕೃತಿಗೆ ಆದ ಹಾನಿಯನ್ನು ಪರಿಶೀಲಿಸಿದ ಆತ ಏನೂ ಆಗೇ ಇಲ್ಲ ಎನ್ನುವಂತೆ ಅಲ್ಲಿಂದ ಹೊರ ಹೋಗಿದ್ದಾನೆ. ಈಗ ಆ ವ್ಯಕ್ತಿಯ ಗುರುತನ್ನ ಪತ್ತೆ ಮಾಡಲಾಗಿದ್ದು, ಅಕಸ್ಮಾತ್‌ ಆಗಿ ತನ್ನಿಂದ ಆದ ಈ ಹಾನಿಯ ಬಗ್ಗೆ ತನಗೆ ಖೇದವಿದೆ ಎಂದು ಹೇಳಿಕೊಂಡಿದ್ದಾನೆ. ಆತನ ಈ ಕೃತ್ಯಕ್ಕೆ ದಂಡ ವಿಧಿಸಬೇಕೋ ಬೇಡವೋ ಎಂದು ಇಲ್ಲಿನ ಟ್ರೆವಿಸೋ ಕೋರ್ಟ್ ಚಿಂತನೆ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...