ಪುಟ್ಟ ಹುಡುಗನೊಬ್ಬ ಮೊದಲ ಬಾರಿಗೆ ತನ್ನ ಪುಟಾಣಿ ತಂಗಿಯನ್ನ ಕಂಡು ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಸೋಮವಾರ ಸಂಜೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾದ 56 ಸೆಕೆಂಡ್ನ ಈ ವಿಡಿಯೋ ಮಿಲಿಯನ್ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.
ವಿಡಿಯೋದಲ್ಲಿ ಪುಟ್ಟ ಹುಡುಗನೊಬ್ಬ ಪುಟಾಣಿ ಕಂದಮ್ಮನನ್ನ ಎತ್ತಿಕೊಳ್ಳಲು ಹೋಗುತ್ತಾನೆ. ಆದರೆ ಆತನ ತಂದೆ ಸೋಫಾದಲ್ಲಿ ಕೂರಲು ಹೇಳುತ್ತಿದ್ದಂತೆಯೇ ಅಲ್ಲಿ ಹೋಗಿ ಕುಳಿತ ಪುಟಾಣಿ ಹುಡುಗ ತನ್ನ ಮಡಿಲ ಮೇಲೆ ಮಗುವನ್ನ ಮಲಗಿಸಿಕೊಂಡಿದ್ದಾನೆ. ತಂಗಿಯನ್ನ ನೋಡಲು ಆತ ಉತ್ಸುಕನಾಗಿದ್ದ ರೀತಿಯನ್ನ ಕಂಡ ನೆಟ್ಟಿಗರು ವ್ಹಾವ್ ಎಂದಿದ್ದಾರೆ.
https://twitter.com/HopkinsBRFC/status/1330835757477617665