alex Certify ನೀವೂ ಮಾಡಲು ಮುಂದಾಗಿದ್ದೀರಾ ಈ ಚಾಲೆಂಜ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ಮಾಡಲು ಮುಂದಾಗಿದ್ದೀರಾ ಈ ಚಾಲೆಂಜ್…?

ವಿಶ್ವಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಅನೇಕರು ಸೋಂಬೇರಿಗಳಾಗಿ ಕಾಲ ಕಳೆದರೆ ಮತ್ತೆ ಕೆಲವರು ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ. ಇನ್ನು ಹಲವಾರು ವಿವಿಧ ಚಾಲೆಂಜ್ ಹಾಕಿಕೊಂಡು ದಿನ ದೂಡುತ್ತಿದ್ದಾರೆ.

ಇತ್ತೀಚೆಗಂತೂ ಸಾಮಾಜಿಕ ಮಾಧ್ಯಮದ ಮೂಲಕ ಸವಾಲುಗಳನ್ನು ಹಾಕಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪಿಲ್ಲೊ ಚಾಲೆಂಜ್ ನಿಂದ ಹಿಡಿದು ಇತ್ತೀಚಿನ ಮೆಟ್ ಗಾಲಾ ಚಾಲೆಂಜ್ ವರೆಗೆ, ಫ್ಯಾಶನ್ ಚಾಲೆಂಜ್ ಗಳು ನಡೆದವು.

ಇದೀಗ ಇನ್ನೊಂದು ಚಾಲೆಂಜ್ ಪ್ರವೃತ್ತಿ ಆರಂಭವಾಗಿದೆ. ಇದನ್ನು ಟೈನಿ‌ ಮೇಕಪ್ ಚಾಲೆಂಜ್ ಎಂದು ಕರೆಯಲಾಗುತ್ತಿದೆ. ಈ ಚಾಲೆಂಜ್ ನಲ್ಲಿ ಮೇಕಪ್ ಸಹಾಯದಿಂದ ಮುಖವು ಮಗುವಿನ ರೀತಿ ರೂಪಾಂತರಗೊಳ್ಳುತ್ತದೆ.

ಕಣ್ಣುಗಳು ವಿಭಿನ್ನ ಶೈಲಿಯ ಲೈನರ್ ಅಥವಾ ಐಬ್ರೋಸ್ ನಿಂದ ಎದ್ದು ಕಾಣುತ್ತದೆ. ಮುಖದ ಮೇಲೆ ಕಾರ್ಟೂನ್ ರೀತಿಯ ವೈಶಿಷ್ಟ್ಯಗಳನ್ನು ತೋರಿಸಲು ಸಂಗತಿಗಳನ್ನು ಕಾಣಬಹುದಾಗಿದೆ. ಮೂಗಿನ ಮೇಲೆ ಪುಟ್ಟಮೂಗು, ಮೂಗಿನ ಹೊಳ್ಳೆ ಬಾಯಿಯ ರೀತಿ ಚಿತ್ರಿಸುವ ಮೂಲಕ ಫೇಸ್ ಚಾಲೆಂಜ್ ನಗುತರಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...