
ವರದಿಗಳ ಪ್ರಕಾರ ಆರು ದಿನಗಳ ಬಳಿಕ ಕೊನೆಗೂ ಈ ಪ್ರಾಣಿಯನ್ನ ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಇಂಡಿಯಾ ಎಂಬ ಹೆಸರನ್ನ ಹೊಂದಿದೆ ಎನ್ನಲಾದ ಈ ಹುಲಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಹುಲಿಗೆ ಬಂದೂಕನ್ನ ತೋರಿಸಿದ್ದಾನೆ.
ಇದೇ ಏರಿಯಾದ ನಿವಾಸಿಯಾಗಿರುವ ವಿಕ್ಟರ್ ಹ್ಯುಗೋ ಎಂಬವರು ಮನೆಯಿಂದ ಹೊರ ಬಂದು ಹುಲಿ ಮೇಲೆ ಗುಂಡು ಹಾರಿಸದಂತೆ ಮನವಿ ಮಾಡಿದ್ದಾರೆ. ಇದಾದ ಬಳಿಕ ಆ ವ್ಯಕ್ತಿ ತನ್ನ ಕಾರಿನಲ್ಲಿ ತೆರಳಿದ್ದಾನೆ.
ಬಳಿಕ ಕಾರಿನ ಸಮೇತ ಆ ವ್ಯಕ್ತಿಯನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಆತನ ಬಳಿ ಹುಲಿ ಇಲ್ಲದ್ದನ್ನ ನೋಡಿದ ಬಳಿಕ ಆ ಹುಲಿಯು ಈ ವ್ಯಕ್ತಿಗೆ ಸೇರಿದ್ದಲ್ಲ ಎಂದು ತಿಳಿದುಬಂದಿದೆ
ಈ ಘಟನೆ ನಡೆದ ಕೆಲ ದಿನಗಳ ಬಳಿಕ ಹುಲಿಯು ಮತ್ತೆ ಅದೇ ಪ್ರದೇಶದಲ್ಲಿ ತಿರುಗುತ್ತಿರೋದು ಕಂಡು ಬಂದಿದೆ. ಬಳಿಕ ಇದು ವಿಕ್ಟರ್ ಹ್ಯುಗೋ ಹಾಗೂ ಅವರ ಪತ್ನಿಗೆ ಸೇರಿದ ಹುಲಿ ಎಂದು ತಿಳಿದಿದೆ.
ಪೊಲೀಸರು ಈ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ದು ಈ ಹುಲಿಯನ್ನ ಹಸ್ತಾಂತರಿಸಲು ವಿಕ್ಟರ್ ಪತ್ನಿ ಒಪ್ಪಿದ್ದಾರೆ ಎಂದು ಹೇಳಿದ್ದಾರೆ. ಹೌಸ್ಟೊನ್ ಪೊಲೀಸರು ಪೋಸ್ಟ್ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ವಿಕ್ಟರ್ ದಂಪತಿ ಹುಲಿಯನ್ನ ಮುದ್ದಿಸುತ್ತಿರೋದನ್ನ ಕಾಣಬಹುದಾಗಿದೆ.