ಚೀನಾ ಟುಗಿಯಾಂಗ್ ಪಟ್ಟಣದಲ್ಲಿ ಒಂದೇ ಸಮಯಕ್ಕೆ ಮೂರು ಸೂರ್ಯ ಆಕಾಶದಲ್ಲಿ ಗೋಚರವಾಗುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ವಿಸ್ಮಯ ಘಟನೆ ಬೆಳಗ್ಗೆ 6.30ರಿಂದ 9.30ರವರೆಗೆ ಕಂಡು ಬಂದಿದೆ.
ಆಕಾಶದಲ್ಲಿ ಮೂರು ಸೂರ್ಯಗಳು ಕಾಣ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದರಲ್ಲಿ ಎರಡು ಸೂರ್ಯಗಳನ್ನ ವಿಜ್ಞಾನದ ಭಾಷೆಯಲ್ಲಿ ಫ್ಯಾಂಟಮ್ ಸೂರ್ಯಗಳು ಅಂತಾ ಕರೆಯಲಾಗುತ್ತೆ. ಈ ಪ್ರಕ್ರಿಯೆಯನ್ನ ವಿಜ್ಞಾನದಲ್ಲಿ ಸನ್ ಡಾಗ್ಸ್ ಎಂದು ವ್ಯಾಖ್ಯಾನಿಸಲಾಗಿದೆ.