ಸಿಂಹಗಳು ಖಾಸಗಿ ಜೆಟ್‌ನಲ್ಲಿ ಪರಸ್ಪರ ಮುದ್ದಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಖುಷಿಪಡಿಸಿದೆ.
ಭಾರೀ ಗಾತ್ರದ ಸಿಂಹಗಳು ತಲಾ 190 ಕೆಜಿ ಇದ್ದು,
ಅವುಗಳನ್ನು ದಕ್ಷಿಣ ಆಫ್ರಿಕಾದ ಖಂಬ್ ಕಲಹರಿ ಸಂರಕ್ಷಣಾ ಪ್ರದೇಶದಿಂದ ಪ್ರಿಟೋರಿಯಾದ ಉತ್ತರಕ್ಕೆ ಇರುವ ಮಾಬುಲಾ ಗೇಮ್ ಸಂರಕ್ಷಣಾ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು.
ಮೀನು ಹಿಡಿಯುತ್ತಿದ್ದವನ ಬೆನ್ನಟ್ಟಿ ಬಂತು ಮೊಸಳೆ….! ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ
ಲಾಭದ ಉದ್ದೇಶ ಹೊಂದಿರದ ಬಹಳಷ್ಟು ಪೈಲಟ್‌ಗಳನ್ನು ಹೊಂದಿರುವ ತಂಡ ಈ ಸಿಂಹಗಳನ್ನು ಸ್ಥಳಾಂತರಿಸಿದೆ. ಸಂತಾನೋತ್ಪತ್ತಿ ಕಡಿಮೆ ಮಾಡುವ ಸಲುವಾಗಿ ಸಿಂಹಗಳನ್ನು ದಕ್ಷಿಣ ಆಫ್ರಿಕಾದ ಹೊಸ ಮೀಸಲು ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ವಿಮಾನದಲ್ಲಿದ್ದಾಗ, ಸಿಂಹಗಳು ಪರಸ್ಪರ ಮುದ್ದಾಡುತ್ತಿರುವುದು ಕಂಡುಬಂತು, ದೊಡ್ಡ ಪಂಜುಗಳನ್ನು ಒಂದು ಇನ್ನೊಂದರ ಮೇಲೆ ಇಟ್ಟುಕೊಂಡವು. ಅವು ಶಾಂತವಾಗಿದ್ದವು ಮತ್ತು ಕಟ್ಟಲ್ಪಟ್ಟಿದ್ದರಿಂದ ಆರೈಕೆದಾರರು ಯಾವುದೇ ತೊಂದರೆ ಇಲ್ಲದೆ ಕ್ಷಣವನ್ನು ಸೆರೆಹಿಡಿದಿದ್ದಾರೆ.