ಮೂರು ಕಾಲಿರುವ
ಶ್ವಾನವೊಂದನ್ನು ಮಾಲೀಕರು ಒಂದೇ ದಿನ ಎರಡು ಬಾರಿ ಹೊರಹಾಕಿದರರೂ, ಅಂತಿಮವಾಗಿ ಶಾಶ್ವತ ಸೂರೊಂದು ಸಿಕ್ಕಿದೆ.
ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೊಬ್ಬಳು ಕಾರಿನಲ್ಲಿ ಬಂದು, ಕಾರಿನಲ್ಲಿದ್ದ ಎರಡು ಶ್ವಾನಗಳನ್ನು ಕೆಳಗಿಳಿಸಿದ್ದಾಳೆ. ಈ ವೇಳೆ ದೈಹಿಕ ನ್ಯೂನತೆ ಇಲ್ಲದ ಕಪ್ಪು ನಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಆದರೆ ಮೂರು ಕಾಲು ಹೊಂದಿದ್ದ ಟಿನ್‌ಟಿನ್ ನಾಯಿಯನ್ನು ಬೀದಿಯಲ್ಲಿ ಬಿಟ್ಟಿದ್ದಾರೆ.
ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಸ್ಥಳೀಯರೊಬ್ಬರು ನಾಯಿಯನ್ನು ಪುನಃ ಮಾಲೀಕರ ಮನೆಗೆ ತಲುಪಿಸಿದ್ದರು. ಆದರೆ ಅದೇ ದಿನ ಸಂಜೆ ಆಕೆಯ ಪತಿ ಬಂದು ಶ್ವಾನವನ್ನು ಬಿಟ್ಟು ಹೋಗಿದ್ದ. ಇದೀಗ ಪಟಾಸ್ ಗೌರ್ರೇಸ್ ಅನಿಮಲ್ ಚಾರಿಟಿ ಸಂಸ್ಥೆ ಈ ಶ್ವಾನವನ್ನು ಕರೆದುಕೊಂಡಿದ್ದು, ಇದೀಗ ಸಾಕುತ್ತಿದ್ದಾರೆ . ಟಿನ್‌ಟಿನ್ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.
https://www.facebook.com/animalfreedomfighter/videos/2645224662365950