ಧಾರ್ಮಿಕ ಮುಖಂಡರ ತೀವ್ರ ಒತ್ತಡದ ಬಳಿಕ ಕೊರೊನಾ ಸೋಂಕು ಹೆಚ್ಚಳದ ಹೊರತಾಗಿಯೂ ಪಾಕ್ ಸರ್ಕಾರ ಲಾಹೋರ್ನಲ್ಲಿ ಮೂರು ದಿನಗಳ ಸಭೆ ನಡೆಸಲು ತಬ್ಲಿಘಿ ಜಮಾತ್ ಸದಸ್ಯರಿಗೆ ಅವಕಾಶ ನೀಡಿದೆ.
ಧಾರ್ಮಿಕ ಸಭೆಗೆ ಭಾಗವಹಿಸಲು ಪಾಕ್ ಸರ್ಕಾರ 54000 ಮಂದಿ ಅವಕಾಶ ನೀಡಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಯ ಜನರು ಆಗಮಿಸ್ತಾ ಇದ್ದಾರೆ. ಆದರೆ ವಿದೇಶದ ಯಾವುದೇ ಪ್ರಜೆಗೆ ಸಭೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಸಭೆಯಲ್ಲಿ ಕೊರೊನಾ ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪಾಕ್ ಸರ್ಕಾರ ಹೇಳಿದೆ. ಮುಂಜಾಗ್ರತಾ ಕ್ರಮವಾಗಿ ಸಭೆಯಲ್ಲಿ ಭಾಗವಹಿಸಲು ಮಕ್ಕಳು ಹಾಗೂ ವೃದ್ಧರಿಗೆ ನಿರ್ಬಂಧ ಹೇರಲಾಗಿದೆ.