ಕೆಲವು ಪ್ರತಿಭೆಗಳು ಎಲೆಮರೆ ಕಾಯಿಯಂತೆ, ಹೊರಪ್ರಪಂಚಕ್ಕೆ ಗೊತ್ತಾಗುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಇಂತಹ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದೆ.
ಇಲ್ಲೊಂದು ಪ್ರಕರಣದಲ್ಲಿ, ಮಹಿಳೆ ವೃತ್ತಿಪರ ಆಟಗಾರರನ್ನೂ ಮೀರಿಸುವಂತೆ ಫುಟ್ಬಾಲ್ ನಲ್ಲಿ ಕಾಲ್ಚೆಳಕ ತೋರಿಸಿ ನೆಟ್ಟಿಗರು ಹುಬ್ಬೇರುವಂತೆ ಮಾಡಿದ್ದಾರೆ.
ಆಕ್ಪೀಸ್ ಎಂಬ ಟ್ವೀಟರ್ ಖಾತೆಯಲ್ಲಿ ಬಿತ್ತರಗೊಂಡ ವಿಡಿಯೋದಲ್ಲಿ, ಆ ಮಹಿಳೆ ಹೈ ಹೀಲ್ಡ್ ತೊಟ್ಟು ಫುಟ್ಬಾಲ್ ನಲ್ಲಿ ಕೌಶಲ್ಯ ಪ್ರದರ್ಶಿಸುತ್ತಾರೆ. ಹಣೆ ಮೇಲೆ ಬಾಲ್ ನಿಲ್ಲಿಸಿಕೊಳ್ಳುತ್ತಾರೆ, ಪುಶಪ್ ಕೂಡ ಮಾಡಿ ಗಮನ ಸೆಳೆಯುತ್ತಾರೆ.
ಈ ವಿಡಿಯೋಗೆ ನೂರಾರು ಪ್ರತಿಕ್ರಿಯೆಗಳು ಬಂದಿವೆ. ಟ್ವೀಟ್ ಮಾಡಿರುವ ವ್ಯಕ್ತಿಯು, ಈ ವಿಡಿಯೋ ನೋಡಿ ಪ್ರತಿಕ್ರಿಯಿಸಲು ಕ್ರಿಸ್ಟಿಯಾ ರೊನಾಲ್ಡೊ, ಮೆಸ್ಸಿ 24 ಗಂಟೆ ಸಮಯವಿದೆ ಎಂಬ ಶೀರ್ಷಿಕೆ ನೀಡಿದ್ದಾರೆ.