alex Certify ವಿಚಿತ್ರ ಖಯಾಲಿಗೆ ಹೀಗಾಗಿದೆ ಈ ಯುವತಿಯ ತುಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಖಯಾಲಿಗೆ ಹೀಗಾಗಿದೆ ಈ ಯುವತಿಯ ತುಟಿ…!

ಬಲ್ಗೇರಿಯಾ: ಅಧರದ(ತುಟಿ) ಅಂದಕ್ಕೆ ಅದುರದವರಿಲ್ಲ. ಹೀಗಾಗಿ ಮಧುರ ಅಧರ ಹೊಂದಲು ಮಾನಿನಿಯರು ಮಾಡುವ ಕಸರತ್ತು ಒಂದೆರಡಲ್ಲ. ಲಿಪ್‌ ಸ್ಟಿಕ್ ಲೇಪಿಸುವುದು ಸಾಮಾನ್ಯ ಕೆಲವರು ಅಧರ ಎದ್ದು ಕಾಣಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಇಂಜಕ್ಷನ್ ಪಡೆಯುತ್ತಾರೆ.

ಆ್ಯಂಡ್ರಿಯಾ ಇವಾನೊವಾ ಎಂಬ ಬಲ್ಗೇರಿಯಾದ 22 ವರ್ಷದ ಇನ್ಸ್ಟಾಗ್ರಾಂ‌ ಮಾಡೆಲ್ ತನ್ನ ತುಟಿ ಎದ್ದು ಕಾಣುವಂತೆ ಮಾಡಿಕೊಳ್ಳಲು ಕನಿಷ್ಠ 20 ಬಾರಿ ಇಂಜಕ್ಷನ್ ಪಡೆದಿದ್ದಾರೆ‌. ಇದರಿಂದ ಆಕೆಯ ತುಟಿಗಳು ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹಿಗ್ಗಿ ಪಕ್ಕಾ ತೊಂಡೆ ಹಣ್ಣಿನಂತಾಗಿವೆ. ಆಕೆ ಈಗ ಜೀವ ಇರುವ ಬಾರ್ಬಿ ಗರ್ಲ್ ತರ ಕಾಣುತ್ತಿದ್ದಾಳೆ.

ಆದರೆ, ಆ ಪುಣ್ಯಾತ್ಗಿತ್ತಿ ಇಷ್ಟಕ್ಕೆ ಇಂಜಕ್ಷನ್ ಪಡೆಯುವುದನ್ನು ನಿಲ್ಲಿಸುವಂತೆ ಕಾಣುವುದಿಲ್ಲ. ತನ್ನ ತುಟಿ ವಿಶ್ವದಲ್ಲೇ ಅತಿ ದೊಡ್ಡದು ಎಂದು ದಾಖಲೆ ಮಾಡಬೇಕು ಎಂಬುದು ಆಕೆಯ ಆಸೆಯಂತೆ.‌ ಒಮ್ಮೆ ತುಟಿ ಇಂಜಕ್ಷನ್ ಪಡೆಯಲು 135 ಪೌಂಡ್ ಖರ್ಚು ಮಾಡಬೇಕು.‌ 2018 ರಿಂದ ಈ ತುಟಿ ಚಿಕಿತ್ಸೆಗಾಗಿಯೇ ಸಾವಿರಾರು ಪೌಂಡ್‌ ಹಣವನ್ನು ಆಕೆ ವ್ಯಯ ಮಾಡಿದ್ದಾಳೆ. “ತುಟಿ ಹಿಗ್ಗಿಸುವ ಇಂಜಕ್ಷನ್‌ ಪಡೆದ ನಂತರ ಎರಡು ಮೂರು ದಿನ ಊಟ, ತಿಂಡಿ ಮಾಡಲು ಕಷ್ಟವಾಗುತ್ತದೆ. ಆದರೂ ನಾನು ಅದನ್ನು ಇಷ್ಟಪಡುತ್ತೇನೆ. ಕೆಲವು ವೈದ್ಯರು ಇಷ್ಟು ಸಾಕು ಎಂದು ಸಲಹೆ ನೀಡುತ್ತಾರೆ. ಆದರೆ, ನನಗೆ ಇಲ್ಲಿಗೇ ನಿಲ್ಲಿಸಲು ಇಷ್ಟವಿಲ್ಲ. ಇನ್ನೊಮ್ಮೆ ಇಂಜಕ್ಷನ್ ಪಡೆಯಲು ಕನಿಷ್ಠ ಎರಡು ತಿಂಗಳು ಕಾಯುವಂತೆ ನನಗೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನುತ್ತಾರೆ ಆ್ಯಂಡ್ರಿಯಾ.

View this post on Instagram

????

A post shared by Andrea Ivanova (@andrea.andrea345) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...