alex Certify ಈ ಕಾರಣಕ್ಕೆ ಪಾದರಕ್ಷೆ ಧರಿಸುವುದಿಲ್ಲ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಪಾದರಕ್ಷೆ ಧರಿಸುವುದಿಲ್ಲ ಮಹಿಳೆ

ಜನರಿಗೆ ಚಿತ್ರವಿಚಿತ್ರ ಕ್ರೇಜ್ ಇರುತ್ತದೆ. ಒಬ್ಬರಿಗೆ ತಲೆಕೂದಲು ಉದ್ದ ಬಿಡುವ ಆಸೆ, ಮತ್ತೆ ಕೆಲವರಿಗೆ ಕೈಬೆರಳಿನ ಉಗುರನ್ನು ಉದ್ದವಾಗಿ ಬಿಡುವ ಹಠ. ಇಲ್ಲೊಬ್ಬ ಮಹಿಳೆ ಕಾಲಿಗೆ ಚಪ್ಪಲಿಯನ್ನು ಹಾಕಲು ಸಾಧ್ಯವಾಗದಂತೆ ಕಾಲ್ಬೆರಳಿನ ಉಗುರು ಬೆಳೆಸಿದ್ದಾರೆ.

ಅರಿಂಡಾ ಸ್ಟಾರ್ಮ್ ಆರಂಭದಲ್ಲಿ ತನ್ನ ಬೆರಳಿನ ಉಗುರುಗಳ ಮೇಲೆ ಹೆಚ್ಚಿನ ಪ್ರೀತಿ ಬೆಳೆಸಿಕೊಂಡರು.‌ ಪರಿಣಾಮ ಉಗುರು ಬೆಳೆಯುತ್ತಾ ಹೋಯಿತು.

ಹೀಗಾಗಿ ಆಕೆಯು ಬೂಟ್ಸ್ ಧರಿಸುವುದಿಲ್ಲ, ಓಡುವುದಕ್ಕೂ ಸಾಧ್ಯವಿಲ್ಲ. ಆಕೆಯ ಉಗುರಿನ ಗಾತ್ರ ಕಂಡ ಜನರು ಒಮ್ಮೆ ಹೌಹಾರುತ್ತಾರೆ, ಆನಂದಿಸುವರೂ ಇದ್ದಾರೆ.

58 ವರ್ಷದ ಈಕೆ ಓಹಿಯೋದ ಕೊಲಂಬಸ್ ನಲ್ಲಿ ನೆಲೆಸಿದ್ದು, ಜಾಲತಾಣದಲ್ಲಿ ಉಗುರಿನ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಅಕೌಂಟ್ ಸ್ಪೆಷಲಿಸ್ಟ್ ಹುದ್ದೆಯನ್ನು 2008ರಲ್ಲಿ ತ್ಯಜಿಸಿದ್ದ ಈಕೆ, ಉಗುರಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು.

ಅತಿ ಉದ್ದವಾದ ಉಗುರು ಬೆಳೆಸಿರುವುದು ಕೂಡ ಆಕೆಯ ಹಣ ಸಂಪಾದನೆಗೆ ಒಂದು ದಾರಿಯಾಗಿದೆ. ಈ ರೀತಿ ಕಾಲ್ಬೆರಳು ವಿರಳವಾಗಿ ಇರುವುದರಿಂದ ಹೆಚ್ಚು ಜನಪ್ರಿಯವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...