alex Certify 2020 ರ ಶೋಕಗಾಥೆ ಹೇಳುತ್ತಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020 ರ ಶೋಕಗಾಥೆ ಹೇಳುತ್ತಿದೆ ಈ ವಿಡಿಯೋ

ಭಾರೀ ಶೋಕದ ವಾತಾವರಣದಿಂದಲೇ ಆರಂಭಗೊಂಡ 2020ರ ವರ್ಷಪೂರ್ತಿ ಜಗತ್ತಿನೆಲ್ಲೆಡೆ ಬರೀ ಅನಿಶ್ಚಿತತೆಗಳೇ ಆಗಿಬಿಟ್ಟಿವೆ.

ಈ ವರ್ಷದಲ್ಲಿ ಜಗತ್ತಿನಾದ್ಯಂತ ಸಂಭವಿಸಿದ ದೊಡ್ಡ ಘಟನೆಗಳನ್ನು ಒಳಗೊಂಡ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಸ್ವಿಜರ್ಲೆಂಡ್‌ನ ಇಡಿಎಂ ಕಲಾವಿದ ಸೀ-ರೋ ಕಂಪೋಸ್ ಮಾಡಿರುವ ಮ್ಯೂಸಿಕ್ ಇರುವ ಈ ವಿಡಿಯೋದಲ್ಲಿ, ಜಗತ್ತಿನಾದ್ಯಂತ ಸಂಭವಿಸಿದ ಅನೇಕ ನತದೃಷ್ಟಕರ ಘಟನೆಗಳ ಮಾಂಟೇಜ್‌ ಅನ್ನು ಮಾಡಲಾಗಿದೆ.

ಬ್ಲಾಕ್ ಲೈವ್ಸ್‌ ಮ್ಯಾಟರ್‌ ಪ್ರತಿಭಟನೆಗಳು, ಅಮೆರಿಕ ಚುನಾವಣೆ, ಬೈರೂತ್‌ ಸ್ಫೋಟ, ಕ್ರೀಡಾ ಕ್ಷೇತ್ರದ ದಿಗ್ಗಜರಾದ ಕೋಬೆ ಬ್ರಯಾಂಟ್ ಹಾಗೂ ಡಿಯೆಗೋ ಮರಡೋನಾರ ಮರಣ ಸೇರಿದಂತೆ ಅನೇಕ ಘಟನೆಗಳನ್ನು ಈ ವಿಡಿಯೋದಲ್ಲಿ ಸೇರಿಸಲಾಗಿದೆ.

ವಿಡಿಯೋದ ಕೊನೆಯಲ್ಲಿ ಮುಂಬರುವ ದಿನಗಳ ಬಗ್ಗೆ ಆಶಾದಾಯಕ ನೋಟ್‌ ಒಂದರ ಮೂಲಕ ತೆರೆ ಎಳೆಯಲಾಗಿದೆ.

2020 Remixed ! (Year review by Cee-Roo)

We are not going to forget this year any time soon!

Posted by Cee-Roo on Thursday, December 17, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...