ಇಸ್ತಾಂಬುಲ್: ಟರ್ಕಿ ದೇಶದ ಪಶ್ಚಿಮ ಎಡ್ರಿನ್ ಪ್ರಾಂತ್ಯದ ರೆಸಿಪ್ ಮಿರ್ಜಾನ್ ಎಂಬ ನಿವೃತ್ತ ಪೋಸ್ಟ್ ಮೆನ್ ಸಾಯಂಕಾಲ ವಾಕಿಂಗ್ ಗೆ ಹೊರಟರೆ ಅವರ ಜತೆ ಒಬ್ಬ ವಿಶಿಷ್ಟ ಸ್ನೇಹಿತೆ ಜತೆಯಾಗುತ್ತಾಳೆ. ಈ ಪ್ರಕ್ರಿಯೆ ಒಂದೆರಡಲ್ಲ ಸುಮಾರು ಮೂವತ್ತೇಳು ವರ್ಷದಿಂದ ನಡೆದಿದೆ.
ಸ್ನೇಹಿತೆ ಎಂದಿದ್ದು ಮನುಷ್ಯನಲ್ಲ ಒಂದು ಹಂಸ. ಮಿರ್ಜಾನ್ ಹಾಗೂ ಹಂಸದ ನಡುವಿನ ಸ್ನೇಹದ ಹಿಂದೆ ಅವರೂಪದ ಕತೆಯಿದೆ.
ಟಿಕ್ ಟಾಕ್ ಮಾದರಿಯಲ್ಲೇ theek-thaak ಅಪ್ಲಿಕೇಶನ್ ರೆಡಿ
ಮಿರ್ಜಾನ್ 37 ವರ್ಷದ ಹಿಂದೆ ತೆರಳುವಾಗ ಹಂಸವೊಂದು ಮೊಸಳೆ ದಾಳಿಗೆ ತುತ್ತಾಗಿತ್ತು. ರೆಕ್ಕೆಗಳು ಮುರಿದಿದ್ದವು. ಆಗ ಅವರು ತಡ ಮಾಡದೇ ಮೊಸಳೆ ಬಾಯಿಂದ ಹಂಸವನ್ನು ರಕ್ಷಿಸಿದ್ದರು. ಅದಕ್ಕೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರು. ಅವರ ಆ ಉಪಕಾರವನ್ನು ಹಂಸ ಮೂರು ದಶಕ ಕಳೆದರೂ ಮರೆತಿಲ್ಲ.