alex Certify ಅಚ್ಚರಿಗೆ ಕಾರಣವಾಗಿದೆ ಈ ಪಾರದರ್ಶಕ ಟಾಯ್ಲೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ಪಾರದರ್ಶಕ ಟಾಯ್ಲೆಟ್

ಸಿಡ್ನಿ:‌ ಸುಂದರವಾದ ಮತ್ತು ವಿಭಿನ್ನ ವಿನ್ಯಾಸದ ಮನೆಗಳು ಮತ್ತು ಅಪಾರ್ಟ್‌ ಮೆಂಟ್ ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ನೋಡಿರಬಹುದು. ಆದರೆ ಸಿಡ್ನಿಯ ಮನೆಯೊಂದು ವಿಚಿತ್ರ ವಿನ್ಯಾಸದಿಂದ ಜಾಲತಾಣದಲ್ಲಿ ಹರಿದಾಡುತ್ತಿದೆ .

ಈ ಅಪಾರ್ಟ್ ಮೆಂಟ್ ವೆಬ್ ಸೈಟ್ ಒಂದರಲ್ಲಿ ವಾರಕ್ಕೆ 350 ಡಾಲರ್ ಗೆ ಬಾಡಿಗೆಗೆ ಇದ್ದು, ವ್ಯವಸ್ಥೆಗಳ ಬಗೆಗೆ ವಿವರವಾಗಿ ಬರೆದು ಫೋಟೋಗಳ ಜೊತೆಗೆ ಪ್ರಕಟಿಸಲಾಗಿತ್ತು . ಫೋಟೋ ನೋಡಿದ ಕೆಲವರು ಅಡುಗೆ ಮನೆಯಲ್ಲಿ ವಿಚಿತ್ರವೊಂದನ್ನು ಗಮನಿಸಿದ್ದಾರೆ. ಅದೇನೆಂದರೆ ಅಡುಗೆ ಮನೆ ಮತ್ತು ಬಾತ್ ರೂಮ್ ಗೆ ಗ್ಲಾಸ್ ನ ಗೋಡೆ ಇರುವುದು.

ಅಂದರೆ ಬಾತ್ ರೂಮ್ ನಲ್ಲಿ ನಿಂತರೆ ಅಡುಗೆ ಮನೆ ಎಲ್ಲವೂ ಕಾಣಿಸುತ್ತದೆ. ಅಡುಗೆ ಮನೆಯಲ್ಲಿ ನಿಂತರೆ ಬಾತ್ ರೂಮ್ ಅಲ್ಲಿ ನೆಡೆಯುವುದು ಎಲ್ಲವೂ ಕಾಣಿಸುತ್ತದೆ. ಒಬ್ಬರೇ ಮನೆಯಲ್ಲಿ ವಾಸವಿದ್ದರೆ ಏನು ಸಮಸ್ಯೆ ಆಗಲಾರದು. ಆದರೆ ಯಾರಾದರೂ ಮನೆಗೆ ಅತಿಥಿಗಳು ಬಂದರೆ ? ಎಲ್ಲವೂ ಗೋಚರ.

ಈ ವಿಚಿತ್ರ ವಿನ್ಯಾಸ ಜಗತ್ತಿನ ಗಮನ ಸೆಳೆಯುತ್ತಿದೆ. ಮನೆಯ ಮಾಲೀಕನಿಗೆ ಜೈಲು ಶಿಕ್ಷೆ ಆಗಬೇಕು ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನೊಬ್ಬರು ಈ ರೀತಿ ನಿರ್ಮಿಸುವುದು ಕಾನೂನುಬಾಹಿರ. ಮಾಲೀಕನ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...