alex Certify ʼಕೊರೊನಾʼ ಅಂತ್ಯಗೊಳ್ಳುವ ಸಂದೇಶ ನೀಡ್ತಾ ಆ ಪುಟ್ಟ ಕಂದಮ್ಮ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಅಂತ್ಯಗೊಳ್ಳುವ ಸಂದೇಶ ನೀಡ್ತಾ ಆ ಪುಟ್ಟ ಕಂದಮ್ಮ….?

ಆಗ ತಾನೆ ಹುಟ್ಟಿದ ಕಂದಮ್ಮವೊಂದು ಡಾಕ್ಟರ್​ ಹಾಕಿದ್ದ ಸರ್ಜಿಕಲ್​ ಮಾಸ್ಕ್​​ನ್ನ ತೆಗೆಯುತ್ತಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಚಿತ್ರವನ್ನ ನೋಡಿದ ಅನೇಕರು ಇದು ಕೊರೊನಾ ವೈರಸ್​ ಕೊನೆಗಾಣುವ ಸಂದೇಶವಾಗಲಿ ಅಂತಾ ಹೇಳ್ತಿದ್ದಾರೆ.

ಕೊರೊನ ವೈರಸ್ ವಿಶ್ವಕ್ಕೆ ಬಂದು ಅಪ್ಪಳಿಸಿದ ಮೇಲಂತೂ ಮಾಸ್ಕ್​ ಧರಿಸೋದು ಕಡ್ಡಾಯವಾಗಿ ಹೋಗಿದೆ. ಈ ಚಿತ್ರದಲ್ಲಿ ಯುಎಇ ಮೂಲದ ಹೆರಿಗೆ ತಜ್ಞ ಹಸುಗೂಸನ್ನ ಹಿಡಿದುಕೊಂಡಿದ್ದಾರೆ. ಹಾಗೂ ಆ ಕಂದಮ್ಮ ವೈದ್ಯರ ಮಾಸ್ಕ್​ನ್ನ ತೆಗೆಯೋಕೆ ಪ್ರಯತ್ನಿಸುತ್ತಿದೆ. ಈ ಚಿತ್ರವನ್ನ ಶೇರ್​ ಮಾಡಿರೋ ವೈದ್ಯ ಸಮರ್​ ಚೀಬ್​ ನಾವೆಲ್ಲ ಸದ್ಯದಲ್ಲೇ ಮಾಸ್ಕ್​ ಧರಿಸೋದು ನಿಲ್ಲಿಸುವಂತಾಗಲಿ ಅಂತಾ ಬರೆದುಕೊಂಡಿದ್ದಾರೆ.

ಈ ಚಿತ್ರ ಇನ್ಸ್ಟಾಗ್ರಾಂನಲ್ಲಿ ಶೇರ್​ ಆಗ್ತಿದ್ದಂತೆ ಸಾವಿರಗಟ್ಟಲೇ ಲೈಕ್​ಗಳನ್ನ ಸಂಪಾದಿಸಿದೆ. ಅನೇಕರು ಈ ಫೋಟೋಗೆ ಕಮೆಂಟ್​ ಮಾಡಿದ್ದು, ಈ ಫೋಟೋ 2020ರಲ್ಲಿ ಹೊಸ ಭರವಸೆಯನ್ನ ಹುಟ್ಟು ಹಾಕ್ತಿದೆ ಅಂತಾ ಬರೆದುಕೊಳ್ತಿದ್ದಾರೆ.

https://www.facebook.com/Dr.samer.cheaib/posts/1636288906551287

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...