ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ವಿಶ್ವದಲ್ಲೆಡೆ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬ ನಿಯಮವಿದೆ.
ಇದೇ ನಿಯಮವನ್ನು ನಾಯಿ ಮರಿಯೊಂದು ಅಳವಡಿಸಿಕೊಂಡು ಅಂತರ್ಜಾಲ ವೇದಿಕೆಯಲ್ಲಿ ಗಮನ ಸೆಳೆಯುತ್ತಿದೆ.
ವೆಲ್ ಕಂ ಟು ನೇಚರ್ ಎಂಬ ಹೆಸರಿನ ಟ್ವೀಟರ್ ಖಾತೆಯಿಂದ ಪೋಸ್ಟ್ ಆದ ವಿಡಿಯೋದಲ್ಲಿ, ನಾಯಿಮರಿಯೊಂದು ತನ್ನ ಬಾಯಿಯಲ್ಲಿ ಉದ್ದವಾದ ಮರದ ಕೊಂಬೆಯನ್ನು ಕಚ್ಚಿಕೊಂಡು ಪಾರ್ಕ್ ನಲ್ಲಿ ನಡೆದು ಹೋಗುತ್ತಿರುವುದನ್ನು ಕಾಣಬಹುದು.
ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಉದ್ದದ ಕೋಲನ್ನು ಕಚ್ಚಿಕೊಂಡಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
ಈ ನಾಯಿ ಮುದ್ದಾಗಿದೆ ಉತ್ತಮ ಕೆಲಸ ಮಾಡಿದೆ, ಈ ನಾಯಿ ಜನರಿಗಿಂತ ಚುರುಕಾಗಿದೆ……ಹೀಗೆ ಕಾಮೆಂಟ್ ಗಳು ಬಗೆಬಗೆಯಾಗಿ ಬಂದಿವೆ.
https://twitter.com/welcomet0nature/status/1307608436906094594?ref_src=twsrc%5Etfw%7Ctwcamp%5Etweetembed%7Ctwterm%5E1307608436906094594%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Fthis-puppy-took-social-distancing-very-seriously-watch-adorable-viral-video-1723838-2020-09-21