
ನಾನು ನವೆಂಬರ್ 28ರಂದು ನನ್ನ ಸ್ನೇಹಿತರಿಂದ 2 ಮೆಸೇಜ್ಗಳನ್ನ ಸ್ವೀಕರಿಸಿದ್ದೇನೆ. ಆದರೆ ಆ ಮೆಸೇಜ್ಗಳನ್ನ ಮಾರ್ಪಾಡಿಸಲಾಗಿದೆ. ಮೆಸೇಜ್ನಲ್ಲಿದ್ದ ಮಾಧ್ಯಮ ವಸ್ತುಗಳನ್ನ ತೆಗೆದು ಹಾಕಲಾಗಿತ್ತು. ಅಂದರೆ ನಾನು ಹಾಗೂ ನನ್ನ ಸ್ನೇಹಿತರು ಮೆಸೇಜ್ಗಳಲ್ಲಿ ಎನ್ನನ್ನ ಹಂಚಿಕೊಳ್ಳಬೇಕು ಅನ್ನೋದನ್ನೂ ನಿರ್ಧರಿಸುವ ಹಾಗಿಲ್ವಾ ಎಂದು ಟ್ವಿಟರ್ನಲ್ಲಿ ಜೀನೈನ್ ಪ್ರಶ್ನೆ ಮಾಡಿದ್ದಾರೆ.
ಈ ಪೋಸ್ಟ್ 55 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 15 ಸಾವಿರಕ್ಕೂ ಹೆಚ್ಚು ರಿಟ್ವೀಟ್ಗಳನ್ನ ಪಡೆದುಕೊಂಡಿದೆ. ಕೆಲವರು ಈಕೆಯ ಪೋಸ್ಟ್ನ್ನ ಅಪಹಾಸ್ಯ ಮಾಡಿದ್ದು ಕೆಲವೊಂದು ಎಮೋಜಿಗಳನ್ನ ಕೆಲ ಮೊಬೈಲ್ಗಲೂ ಸಪೋರ್ಟ್ ಮಾಡಲ್ಲ. ಹಾಗಾಗಿ ನೀವು ಹೊಸ ಮೊಬೈಲ್ ಖರೀದಿಸಿ ಅಂತಾ ಸಲಹೆ ನೀಡಿದ್ದಾರೆ. ಇನ್ನು ಕೆಲವರು ಜೀನೈನ್ ವಾದವನ್ನ ಬೆಂಬಲಿಸಿದ್ದಾರೆ.