23 ವರ್ಷದ ಮಿಲಿಯನೇರ್ ಕ್ರಿಸ್ಟಿಯಾನಾ ಒಟ್ಜುಕ್ ಎಂಬ ಮಹಿಳೆಗೆ ಈಗಾಗಲೇ 11 ಮಕ್ಕಳು ಇದ್ದರೂ ಕೂಡ ಸಾಕು ಎಂದು ಎನಿಸಿಲ್ಲವಂತೆ..!
ವಿಷಯ ಏನಪ್ಪ ಅಂದರೆ ಈ ಮಹಿಳೆಗೆ 100 ಮಕ್ಕಳನ್ನ ಹೊಂದುವ ಕನಸಿದೆಯಂತೆ..! 11 ಮಕ್ಕಳೂ ಕೂಡ ಈಕೆಯ ಗರ್ಭದಲ್ಲೇ ಜನಿಸಿದ್ದಾ ಎಂದು ಆಶ್ಚರ್ಯಪಡಬೇಡಿ. ಈಕೆ ಬಾಡಿಗೆ ತಾಯಂದಿರ ಮೂಲಕ 10 ಮಕ್ಕಳನ್ನ ಪಡೆದಿದ್ದಾರೆ.
ಕ್ರಿಸ್ಟಿನಾ ಗಾಲಿಪ್ ಒಜ್ಟುಕ್ ಎಂಬ ಜಾರ್ಜಿಯಾದ ಹೋಟೆಲ್ ಮಾಲೀಕನ ಜೊತೆ ವಿವಾಹವಾಗಿದ್ದಾರೆ. ಈ ದಂಪತಿಗೆ ಒಂದು ಮಗು ಸ್ವಾಭಾವಿಕ ಹೆರಿಗೆಯಾಗಿದ್ದು ಇನ್ನೂ 10 ಮಕ್ಕಳನ್ನ ಬಾಡಿಗೆ ತಾಯಿಯ ಮೂಲಕ ಪಡೆದಿದ್ದಾರೆ.
ಪ್ರತಿಯೊಬ್ಬ ಬಾಡಿಗೆ ತಾಯಿಗೆ 704865.24 ರೂಪಾಯಿ ಪಾವತಿ ಮಾಡಿ ಈ ದಂಪತಿ ಮಕ್ಕಳನ್ನ ಪಡೆದಿದ್ದಾರೆ. ಜಾರ್ಜಿಯಾದಲ್ಲಿ 1997ರಿಂದಲೇ ಬಾಡಿಗೆ ತಾಯ್ತನವನ್ನ ಕಾನೂನು ಬದ್ಧ ಎಂದು ಪರಿಗಣಿಸಲಾಗಿದೆ. ಸಲಿಂಗ ದಂಪತಿಗೆ ಈ ಕಾನೂನು ಅನ್ವಯವಾಗೋದಿಲ್ಲ.
ಹಿಮದಿಂದಾವೃತವಾದ ರಸ್ತೆಯಲ್ಲಿ ಈ ಕೆಲಸ ಮಾಡಿ ಸುದ್ದಿಯಾದ ಮಹಿಳೆ..!
ಕೆಲ ದಿನಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕ್ರಿಸ್ಟಿಯಾನಾ ತಾನು ಹಾಗೂ ತನ್ನ ದಂಪತಿ ಒಟ್ಟು 105 ಮಕ್ಕಳ ಪೋಷಕರಾಗುವ ಕನಸನ್ನ ಕಂಡಿದ್ದೇವೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ನನ್ನ ಬಳಿ 11 ಮಕ್ಕಳಿದ್ದಾರೆ. ಕಳೆದ ತಿಂಗಳಷ್ಟೇ ಒಲಿವಿಯಾ ನಮ್ಮ ಕುಟುಂಬವನ್ನ ಸೇರ್ಪಡೆಯಾಗಿದ್ದಾಳೆ. ನಮ್ಮ ಹಿರಿಯ ಮಗಳು ವಿಕಾಗೆ ನಾನು 6 ವರ್ಷಗಳ ಹಿಂದೆ ಜನ್ಮ ನೀಡಿದ್ದೇನೆ. ಇದಾದ ಬಳಿಕ ಎಲ್ಲಾ ಮಕ್ಕಳನ್ನ ಬಾಡಿಗೆ ತಾಯಿಯ ಮೂಲಕ ಪಡೆದಿದ್ದೇವೆ ಎಂದು ಹೇಳಿದ್ದಾರೆ.