alex Certify ಶ್ವಾನಗಳ ಜತೆ ಬಿಸಿನೆಸ್ ಮೀಟಿಂಗ್ ಮಾಡಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಗಳ ಜತೆ ಬಿಸಿನೆಸ್ ಮೀಟಿಂಗ್ ಮಾಡಿದ ಭೂಪ…!

ಸ್ಕಾಟ್ಲ್ಯಾಂಡ್: ಕರೋನಾ ವೈರಸ್ ಲಾಕ್‌ಡೌನ್ ಕಾಲದಲ್ಲಿ ಸ್ಕಾಟ್ಲ್ಯಾಂಡ್ ನ ಕ್ರೀಡಾ ಪ್ರಸಾರಕ (ವೀಕ್ಷಕ‌ ವಿವರಣೆಕಾರ) ಅಂಡ್ರೇವ್ ಕಾಟರ್ ತಮ್ಮ ನಾಯಿಗಳ ಸಾಹಸದ ವಿಡಿಯೋಗಳ ಮೂಲಕ ತಮ್ಮ ಅಂತರ್ಜಾಲದ ಫಾಲೋವರ್ ಗಳನ್ನು ರಂಜಿಸುತ್ತಿದ್ದಾರೆ.

ಕೇವಲ ಸಾಹಸದ ವಿಡಿಯೋಗಳಲ್ಲ, ಆಲಿವ್ ಮತ್ತು ಮೊಬೆಲ್ ಎಂಬ ತಮ್ಮ ಎರಡು ನಾಯಿಗಳನ್ನಿಟ್ಟುಕೊಂಡು ಝೂಮ್‌ ಮೂಲಕ ಕಾರ್ಪೊರೇಟ್ ಮೀಟಿಂಗ್ ನಡೆಸುವ ವಿಡಿಯೋವನ್ನು ಕಾಟರ್ ಷೇರ್ ಮಾಡಿದ್ದಾರೆ.

ಅದರಲ್ಲಿ ನಾಯಿಗಳು ತಮ್ಮ ಮೂಲ ಬುದ್ದಿ ತೋರಿಸಿವೆ. ಆಲಿವ್ ಎಂಬ ಕಪ್ಪು ನಾಯಿ ಮೀಟಿಂಗ್ ನಲ್ಲಿ ಕುಳಿತಂತೆ ಗಂಭೀರವಾಗಿ ನೋಡುತ್ತ ಕುಳಿತಿದೆ. ಮೊಬೆಲ್ ಎಂಬ ನಾಯಿ ಎರಡು ಬಾರಿ ಮೀಟಿಂಗ್ ನಿಂದ ಹೊರ ಹೋಯಿತು.

ಇನ್ನೊಮ್ಮೆ ತನ್ನ ಕಾಲಿನಿಂದ ಕಿವಿಯನ್ನು ತುರಿಸಿಕೊಳ್ಳಲಾರಂಭಿಸಿತು. ಆದರೂ ಕಾಟರ್ ಮಾತು‌ ಮುಂದುವರಿಸಿದಾಗ ತನ್ನಷ್ಟಕ್ಕೆ ಗೊಂಬೆಗಳನ್ನು ಕಚ್ಚಿಕೊಂಡು ಆಡಲು ಪ್ರಾರಂಭಿಸಿತು.

ನಾಯಿಗಳ ಆಟದ ಈ ವಿಡಿಯೋ ಟ್ವಿಟರ್ ‌ನಲ್ಲಿ 4.3 ಮಿಲಿಯನ್ ವೀಕ್ಷಣೆ ಪಡೆದಿದೆ. 43 ಸಾವಿರ ಜನರು ವಿಡಿಯೋ‌ ಕುರಿತು ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...