alex Certify 20 ವರ್ಷಗಳಿಂದ ದಿನ ಬಿಟ್ಟು ದಿನ ʼಬರ್ಗರ್ʼ‌ ತಿನ್ನುತ್ತಿದ್ದಾನೆ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷಗಳಿಂದ ದಿನ ಬಿಟ್ಟು ದಿನ ʼಬರ್ಗರ್ʼ‌ ತಿನ್ನುತ್ತಿದ್ದಾನೆ ಭೂಪ

ನೀವು ಕೂಡ ಮ್ಯಾಕ್​ಡೊನಾಲ್ಡ್​ ಅಭಿಮಾನಿಯೇ..? ವಾರಾಂತ್ಯದಲ್ಲಿ ಮೆಕ್​ ಡಿಗೆ ಹೋಗಿ ಬರ್ಗರ್​ ತಿಂದು ಬರುವ ಅಭ್ಯಾಸ ನಿಮಗೂ ಇದ್ದಿರಬಹುದು. ಆದರೆ ಇಲ್ಲೊಬ್ಬನಿಗೆ ಈ ಮೆಕ್​ ಡಿಯ ಬರ್ಗರ್​ಗಳ ಮೇಲೆ ಎಷ್ಟು ಪ್ರಾಣ ಅಂದರೆ ಕಳೆದ 20 ವರ್ಷಗಳಿಂದ ಈತ ದಿನಬಿಟ್ಟು ದಿನ ಮೆಕ್​ ಡಿಯ ಬರ್ಗರ್​ಗಳನ್ನ ತಿನ್ನುತ್ತಾ ಬಂದಿದ್ದಾನಂತೆ.

ಜರ್ಮನಿಯ ಡೇವಿಡ್​ ಗೆಯರ್​ ಎಂಬಾತನಿಗೆ ಮೆಕ್​ಡೊನಾಲ್ಡ್​ ಎಂದರೆ ಪಂಚಪ್ರಾಣವಂತೆ. ಇಲ್ಲಿಯವರೆಗೆ ಬರ್ಗರ್ ಆಕೃತಿಯ ಬಟ್ಟೆ, ಶೂ, ಸಾಕ್ಸ್ ಇಂತವನ್ನ ಖರೀದಿ ಮಾಡೋಕೆ ಇಲ್ಲಿಯವರೆಗೆ ಬರೋಬ್ಬರಿ 4.43 ಲಕ್ಷ ರೂಪಾಯಿ ವ್ಯಯಿಸಿದ್ದಾರಂತೆ. ಇದು ಸಾಲದು ಅಂತಾ ಕಾಲಿನ ಮೇಲೆ ಬರ್ಗರ್​ ಆಕೃತಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಕುಕ್ಕೀಸ್​ ತಿನ್ನಲು ಪುಟ್ಟ ಬಾಲಕಿ ಮಾಡಿದ್ದಾಳೆ ಸಖತ್‌ ಸರ್ಕಸ್

ಮ್ಯಾಕ್​ಡೊನಾಲ್ಡ್​ ಮೇಲೆ ಡೇವಿಡ್​​ಗಿರುವ ಪ್ರೀತಿಯನ್ನ ಸಾರೋಕೆ ಅವರ ಕೋಣೆಯ ಗೋಡೆಯ ಮೇಲೆ ಮೆಕ್​ಡೊನಾಲ್ಡ್ ಚಿಹ್ನೆ ಇರೋದನ್ನೂ ನೋಡಬಹುದಾಗಿದೆ.

ಮೆಕ್​ಡೊನಾಲ್ಡ್​ಗೆ ನನ್ನ ಜೀವನದಲ್ಲಿ ಬಹುಮುಖ್ಯ ಭಾಗವಿದೆ. ಹೀಗಾಗಿ ನಾನು ಕಳೆದ ವರ್ಷ ಜುಲೈ ತಿಂಗಳಲ್ಲಿ ಟ್ಯಾಟೂ ಕೂಡ ಹಾಕಿಸಿಕೊಂಡೆ ಎಂದು ಡೇವಿಡ್​ ಹೇಳಿದ್ದಾರೆ. ಇಲ್ಲಿಯವರೆಗೆ ಡೇವಿಡ್​ ಬರೋಬ್ಬರಿ 4360 ಬರ್ಗರ್​​ಗಳನ್ನ ಸೇವಿಸಿದ್ದಾರಂತೆ.ಅಲ್ಲದೇ ಇವರು ಎಂದಿಗೂ ಒಂದೇ ಆರ್ಡರ್​​ನ್ನು ಪದೇ ಪದೇ ಬುಕ್​ ಮಾಡೋದಿಲ್ವಂತೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...