ಇಷ್ಟ ಪಟ್ಟವರ ಜೊತೆ ಡೇಟಿಂಗ್ ಹೋಗೋದು ಅನ್ನೋದು ಈಗಂತೂ ಕಾಮನ್ ಆಗಿಬಿಟ್ಟಿದೆ. ಈಗಂತೂ ಡೇಟ್ ಮಾಡುವವರಿಗಾಗಿಯೇ ವಿವಿಧ ವೆಬ್ಸೈಟ್ ಹಾಗೂ ಅಪ್ಲಿಕೇಶನ್ ಕೂಡ ಲಭ್ಯವಿದೆ. ಆದರೆ ಅಮೆರಿಕದ 24 ವರ್ಷದ ಯುವಕನಿಗೆ ಮಾತ್ರ ಈ ಡೇಟಿಂಗ್ ಅಪ್ಲಿಕೇಶನ್ಗಳನ್ನ ಬಳಕೆ ಮಾಡೋಕೆ ಭಯವಂತೆ.
ಇಷ್ಟಕ್ಕೂ ಈ ಯುವಕ ಈ ರೀತಿ ಡೇಟಿಂಗ್ ಅಪ್ಲಿಕೇಶನ್ಗಳ ಬಗ್ಗೆ ಭಯ ಪಡೋಕೆ ಕಾರಣ ಈತನ ತಂದೆ. ಜೇವ್ ಫೋರ್ಸ್ ತಂದೆ ಒಬ್ಬ ವೀರ್ಯಾಣು ದಾನಿಯಾಗಿದ್ದು ಈಗಾಗಲೇ 500ಕ್ಕೂ ಹೆಚ್ಚು ಬಾರಿ ವೀರ್ಯಾಣುಗಳನ್ನ ದಾನ ಮಾಡಿದ್ದಾನೆ.
ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ತನ್ನ ತಂದೆಯ ವೀರ್ಯಾಣುದಿಂದಲೇ ಹುಟ್ಟಿದವರು ಯಾರಾದ್ರೂ ಸಿಕ್ಕಿಬಿಟ್ಟರೆ ಎಂಬ ಭಯದಿಂದ ಜೇವ್ ಈ ಅಪ್ಲಿಕೇಶನ್ಗಳನ್ನ ಬಳಕೆಯೇ ಮಾಡುತ್ತಿಲ್ಲ.
ಜೇವ್ ತಾಯಿ ಕೂಡ ವೀರ್ಯಾಣು ದಾನಿಯ ಬಳಿಯೇ ವೀರ್ಯ ಪಡೆದು ಜೇವ್ಗೆ ಜನ್ಮ ನೀಡಿದ್ದಾರೆ. ಜೇವ್ಗೂ ಕೂಡ ಈ ವಿಚಾರ ತಿಳಿದಿದೆ. ಈಗಾಗಲೇ ಆತ ತನ್ನ ತಂದೆಯ ವೀರ್ಯಾಣುವನ್ನ ಪಡೆದು ಜನಿಸಿದ ವಿದ್ಯಾರ್ಥಿಯೊಬ್ಬನನ್ನ ತನ್ನ ಶಾಲೆಯಲ್ಲಿ ಪತ್ತೆ ಮಾಡಿದ್ದಾನೆ.
ಜೇವ್ ತಂದೆ ಈವರೆಗೆ 500 ಬಾರಿ ವೀರ್ಯಾಣುಗಳನ್ನ ದಾನ ಮಾಡಿದ್ದಾರೆ ಹಾಗೂ 50ಕ್ಕೂ ಹೆಚ್ಚು ತಾಯಂದಿರು ಇದರಿಂದ ಮಕ್ಕಳನ್ನ ಪಡೆದಿದ್ದಾರೆ ಎನ್ನಲಾಗಿದೆ.